ಸಾಂದರ್ಭಿಕ ಚಿತ್ರ (ಪ್ರತಿಭಟನಾಕಾರರು)
ನವದೆಹಲಿ: : ಶಿಕ್ಷಣ ಮತ್ತು ಉದ್ಯೋಗದಲ್ಲಿ ಜಾಟ್ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಶುಕ್ರವಾರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಡೆ ಹಿಡಿದಿದೆ.
ಹರಿಯಾಣ ಹಿಂದೂಳಿದ ವರ್ಗಗಳ ಕಾಯ್ದೆ 2016ರ ಸಾಂವಿಧಾನಿಕ ಮಾನ್ಯತೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಆದರೆ ಜಾಟ್ ಮೀಸಲಾತಿ ಕುರಿತು ಮಾರ್ಚ್ 31, 2018ರೊಳಗೆ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹಿಂದೂಳಿದ ವರ್ಗವಗಳ ಆಯೋಗಕ್ಕೆ ಸೂಚಿಸಿದೆ.
ರಾಷ್ಟ್ರೀಯ ಹಿಂದೂಳಿದ ವರ್ಗಗಳ ಆಯೋಗವು ಮುಂದಿನ ಮಾರ್ಚ್ 31ರೊಳಗೆ ಜಾಟ್ ಮೀಸಲಾತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೆಚ್ಚುವರಿ ಅಡ್ವೋಕೇಟ್ ಜನರಲ್ ಲೋಕೇಶ್ ಸಿಂಘಾಲ್ ಅವರು ತಿಳಿಸಿದ್ದಾರೆ.
ಜಾಟ್ ಸಮುದಾಯವನ್ನು ಹಿಂದೂಳಿದ ವರ್ಗಗಳ(ಒಬಿಸಿ) ಪಟ್ಟಿಗೆ ಸೇರಿಸಬೇಕು ಎಂದು ಜಾಟ್ ಸಮುದಾಯದ ನಾಯಕರು ಉಗ್ರ ಹೋರಾಟ ನಡೆಸಿದ್ದರು. ಹಿಂಸಾತ್ಮಕ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡಲು ಮುಂದಾಗಿತ್ತು. ಆದರೆ ಇದೀಗ ಹೈಕೋರ್ಟ್ ಅದನ್ನು ತಡೆ ಹಿಡಿದಿರುವುದರಿಂದ ಮತ್ತೆ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದೆಹಲಿ ಮತ್ತು ಹರಿಯಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.