ಬಿಪಿನ್ ರಾವತ್ 
ದೇಶ

ಸೈನ್ಯದ ಮುಂದೆ ವಿವಿಧ ಆಯ್ಕೆಗಳಿವೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

"2016 ರ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಅಂತಹಾ ಇನ್ನೂ ಅನೇಕ ಕಾರ್ಯಾಚರಣೆ ಕೈಗೊಳ್ಳಲು ಭಾರತೀಯ ಸೈನ್ಯವು ಹಲವಾರು ಆಯ್ಕೆಗಳನ್ನು ಹೊಂದಿದೆ"

ನವದೆಹಲಿ: "2016 ರ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಅಂತಹಾ ಇನ್ನೂ ಅನೇಕ ಕಾರ್ಯಾಚರಣೆ ಕೈಗೊಳ್ಳಲು  ಭಾರತೀಯ ಸೈನ್ಯವು ಹಲವಾರು ಆಯ್ಕೆಗಳನ್ನು ಹೊಂದಿದೆ" ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇಂದು ಹೇಳಿದರು.  ಅವರು ಪತ್ರಕರ್ತ ಮತ್ತು ಭದ್ರತಾ ವಿಶ್ಲೇಷಕ ನಿತಿನ್ ಗೋಖಲೆ ಬರೆದಿರುವ "ಸೆಕ್ಯೂರಿಂಗ್ ಇಂಡಿಯಾ ದಿ ಮೋದಿ ವೇ" ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.
2015 ರ ಮ್ಯಾನ್ಮಾರ್ ಕಾರ್ಯಾಚರಣೆ ಮತ್ತು 2016 ರಲ್ಲಿ ಪಾಕಿಸ್ತಾನದ ಆಕ್ರಮಿತ ಕಾಶ್ಮೀರದಲ್ಲಿನ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಅಂತಹ ಮತ್ತಷ್ಟು ಕಾರ್ಯಾಚರಣೆಗಳನ್ನು ಸೈನ್ಯವು ಕೈಗೆತ್ತಿಕೊಳ್ಳುವ ಸಾಮರ್ಥ್ಯ ಹೊಂದಿದೆಯೆ ಎಂದು ಗೋಖಲೆ ರಾವತ್ ಅವರನ್ನು ಪ್ರಶ್ನಿಸಿದಾಗ ರಾವತ್ ಉತ್ತರಿಸಿದರು.
"ಗಡಿರೇಖೆಯಲ್ಲಿ  ಕಾರ್ಯಾಚರಣೆಯನ್ನು ನಡೆಸುವ ಹಲವಾರು ವಿಧಾನಗಳಿವೆ. ಅದೇ ರೀತಿಯ ಕಾರ್ಯಾಚರಣೆಯನ್ನು ನಾವು ಪುನರಾವರ್ತಿಸುವುದಿಲ್ಲ ಏಕೆಂದರೆ ಯಾವುದೇ ಅದು ಪುನರಾವರ್ತನೆಯಾಗಬಾರದು. ನಾವು ಅಚ್ಚರಿಯನ್ನು ನೀಡಬೇಕಾದಲ್ಲಿ, ಹೊಸದನ್ನು ನಾವು ಯೋಜಿಸಬೇಕಾಗಿದೆ" ಸೇನಾ ಮುಖ್ಯಸ್ಥರು ಹೇಳಿದ್ದಾರೆ
ಉಗ್ರರು 18 ಭಾರತೀಯ ಸೈನಿಕರನ್ನು ಕೊಂದ ನಂತರ ಗಡಿಯುದ್ದಕ್ಕೂ ಸ್ಪಷ್ಟ ಸಂದೇಶವನ್ನು ಸಾರಲು ಮಯನ್ಮಾರ್ ಕಾರ್ಯಾಚರಣೆ ಅಗತ್ಯವಾಗಿತ್ತು. ರಾವತ್ ನುಡಿದರು. 
ನಿಯೋಜಿತ ಜೂನಿಯರ್ ಅಧಿಕಾರಿಗಳ ಕೇಡರ್ ಗಳ ಬಗೆಗೆ ಹೇಳಿದ ರಾವತ್ ಈಗ ಅವರಿಗೆ ಸೇನೆಯನ್ನು ಸೇರಲು ಅನುಮೋದಿಸಲಾಗಿದೆ ಮತ್ತು ಜನವರಿ 1, 2018 ಅವರು ಸೇನೆಯ ಭಾಗವಾಗಲಿದ್ದಾರೆ ಎಂದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ಜಾಗತಿಕ ತೈಲ ಮಾರುಕಟ್ಟೆ ಅಸ್ಥಿರ; 48 ಗಂಟೆಗಳಲ್ಲಿ 'ಹಾರ್ಮುಜ್ ಜಲಸಂಧಿ' ತೆರೆಯದಿದ್ದರೆ ವಿದ್ಯುತ್ ಸ್ಥಾವರಗಳ ನಾಶ; ಇರಾನ್'ಗೆ ಟ್ರಂಪ್ ಕಠಿಣ ಎಚ್ಚರಿಕೆ

ಉಡುಪಿ: 'ಸಮಾಧಾನ ಮಹೋತ್ಸವ' ವಿರೋಧಿಸಿ ಪ್ರತಿಭಟನೆ; ಹಿಂದು ಜಾಗರಣಾ ವೇದಿಕೆಯ ಮುಖಂಡರು, ಕಾರ್ಯಕರ್ತರು ಸೇರಿ 38 ಮಂದಿ ವಶಕ್ಕೆ

ಚಿತ್ರದುರ್ಗದಲ್ಲಿ ಭೀಕರ ಆ್ಯಸಿಡ್ ದಾಳಿ: ಮಹಿಳೆ, ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯ, ಆರೋಪಿಗಾಗಿ ಪೊಲೀಸರ ಶೋಧ

West Asia war: ಹಾರ್ಮುಜ್ ಜಲಸಂಧಿ 'ರೀ ಓಪನ್' ಮಾಡಲು 22 ರಾಷ್ಟ್ರಗಳು ಇರಾನ್ ಗೆ ಒತ್ತಾಯ! ಸೇನಾ ಕಾರ್ಯಾಚರಣೆ ಶೀಘ್ರ ಸ್ಥಗಿತ ಎಂದ ಅಮೆರಿಕ

IPL 2026: ಟಿಕೆಟ್ ಖರೀದಿಸುವಾಗ ನಕಲಿ ಲಿಂಕ್ ಗಳ ಬಗ್ಗೆ ಇರಲಿ ಎಚ್ಚರ- ಪೊಲೀಸರ ವಾರ್ನಿಂಗ್

SCROLL FOR NEXT