ತಮ್ಮ ಪುತ್ರನ ವಿವಾಹಕ್ಕೆ ಆಗಮಿಸಿದ ಲಾಲೂ ಪ್ರಸಾದ್ ರನ್ನು ಸುಶೀಲ್ ಮೋದಿ ಸ್ವಾಗತಿಸಿದರು
ಪಾಟ್ನಾ : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು. ಅದನ್ನು ತೊಡೆದುಹಾಕಿರಿ, ಸರಳ ವಿವಾಹಕ್ಕೆ ಹೆಚ್ಚು ಆದ್ಯತೆ ನೀಡಿರಿ ಎಂದು ಇತ್ತೀಚೆಗೆ ರಾಜ್ಯದ ಜನತೆಗೆ ಕರೆ ನೀಡಿದ್ದರು. ಇದೇ ಮಾತುಗಳನ್ನು ಇದೀಗ ಅವರ ಸಂಪುಟ ಸಹೋದ್ಯೋಗಿ, ರಾಜ್ಯದುಪ ಮುಖ್ಯಮಂತ್ರಿಯೂ ಆದ ಸುಶೀಲ್ ಕುಮಾರ್ ಮೋದಿ ಕೃತಿಗಿಳಿದ್ದಾರೆ..
ಸುಶೀಲ್ ಕುಮಾರ್ ಅವರ ಪುತ್ರ ಉತ್ಕರ್ಷ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಇದೀಗ ಕೋಲ್ಕತ್ತಾದ ಲೆಕ್ಕ ಪರಿಶೋಧಕಿ ಯಾಮಿನಿ ಅವರೊಡನೆ ಅತ್ಯಂತ ಸರಳವಾಗಿ ವಿವಾಹವಾಗಿದ್ದಾರೆ. ಇವರ ವಿವಾಹವು. ವಾದ್ಯವೃಂದ, ತಾಳ-ಮೇಳಗಳಾವುದೂ ಇಲ್ಲದೆ ಸರಳ ಕಾರ್ಯಕ್ರಮವಾಗಿತ್ತು.
ಅಚ್ಚರಿ ಏನೆಂದರೆ ಆಹ್ವಾನಿತ ಗಣ್ಯರಿಗೆ ಮಧ್ಯಾಹ್ನದ ಭೋಜನ ಅಥವಾ ಔತಣಕೂಟವೂ ಇರಲಿಲ್ಲ! ವಧು ವರರಿಗೆ ಶುಭ ಹಾರೈಸಲು ಬಂದ ಅತಿಥಿಗಳಿಗೆ ನಾಲ್ಕು ಲಾಡುಗಳಿದ್ದ ಒಂದು ಪೊಟ್ಟಣವನ್ನು ನೀದಲಾಯಿತು. ಇನ್ನು ಮದುವೆಗೆ ಯಾವ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಲಿಲ್ಲ. ಕೇವಲ ವಾಟ್ಸ ಅಪ್ ಹಾಗೂ ಇನ್ನಿತರೆ ಸಾಮಾಜಿಕ ತಾಣಗಳಲ್ಲಿ ಕರೆಯೋಲೆಯನ್ನು ಕಳಿಸಲಾಗಿತ್ತು.ಉಡುಗೊರೆಗಳನ್ನು ತರಬೇಡಿರೆಂದು ಅದೇ ಸಮಯದಲ್ಲಿ ಅತಿಥಿಗಳಿಗೆ ಮನವಿ ಸಲ್ಲಿಸಲಾಗಿತ್ತು.
ಮದುವೆ ಕಾರ್ಯಕ್ರಮದಲ್ಲಿದ್ದ ಇನ್ನೊಂದು ಮುಖ್ಯ ಸಂಗತಿ ಎಂದರೆ ವರದಕ್ಷಿಣೆರಹಿತ ಮದುವೆಗೆ ಬೆಂಬಲ ಸೂಚಿಸಿ ಯಾರು ತಮ್ಮಲ್ಲೂ ಅದನ್ನೇ ಅನುಸರಿಸುವರೋ ಅಂತಹವರ ಸಹಿ ಸಂಗ್ರಹಕ್ಕಾಗಿ ಕೌಂಟರ್ ತೆರೆಯಲಾಗಿತ್ತು. ಇದರೊಡನೆ ದೇಹದ ಅಂಗಾಂಗ ದಾನ ನೀಡುವವರಿಗಾಗಿ ವಿಶೇಷ ಕೌಂಟರ್ ವ್ಯವಸ್ಥೆ ಮಾಡಲಾಗಿಉತ್ತು.
ಲಾಲೂ ಆಗಮನ: ತಮ್ಮ ರಾಜಕೀಯ ಜೀವನದ ಬದ್ದ ವೈರಿ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಪುತ್ರನ ಮದುವೆ ಕಾರ್ಯಕ್ರಮಕ್ಕೆ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಾಜರಾಗಿದ್ದರು.ಇದು ಎಲ್ಲರ ಅಚ್ಚರಿಗೆ ಕಾರಣವಾಗಿದ್ದದ್ದು ಸುಳ್ಳಲ್ಲ.
ಇನ್ನು ಸುಶೀಲ್ ಮೋದಿ ಪುತ್ರನ ವಿವಾಹಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್, ಕೇಂದ್ರ ಸಚಿವರಾದ ಅನಂತ್ ಕುಮಾರ್, ರಾಧಾ ಮೋಹನ್ ಸಿಂಗ್ ಮತ್ತು ರಾಮ್ ವಿಲಾಸ್ ಪಾಸ್ವಾನ್, ಅರುಣ್ ಜೇಟ್ಲಿ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos