ನವದೆಹಲಿ: ಕೇರಳ ಲವ್ ಜಿಹಾದ್ ಪ್ರಕರಣದ ಕೇಂದ್ರ ಬಿಂದುವಾಗಿರುವ ಯುವತಿ ಹಾದಿಯಾಳ ಪತಿ ಷಫಿನ್ ಜಹಾನ್ ವಿವಾಹಕ್ಕೂ ಮುನ್ನವೇ ಇಸ್ಲಾಮಿಕ್ ಉಗ್ರರ ಸಂಪರ್ಕದಲ್ಲಿದ್ದ ಎಂಬ ಮಾಹಿತಿಯನ್ನು ಎನ್ಐಎ ಬಹಿರಂಗಪಡಿಸಿದೆ.
ಹಾದಿಯಾಳನ್ನು ವಿವಾಹವಾಗುವುದಕ್ಕೂ ಕೆಲವು ತಿಂಗಳ ಮುನ್ನ ಎಸ್ ಡಿಪಿಐ ಸಂಘಟನೆಯ ರಾಜಕೀಯ ಸಂಘಟನೆಯಾಗಿರುವ ಪಿಎಫ್ಐ ನ ಕಾರ್ಯಕರ್ತರೂ ಸಕ್ರಿಯವಾಗಿದ್ದ ಫೇಸ್ ಬುಕ್ ಗ್ರೂಪ್ ಮೂಲಕ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ಒಮರ್-ಅಲ್-ಹಿಂದಿ ಪ್ರಕರಣದ ಪ್ರಮುಖ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದ ಎಂದು ಎನ್ಐಎ ಹೇಳಿದೆ.
ಪ್ರಕರಣದ್ ಅಆರೋಪಿಗಳಾದ ಮನ್ಸೀದ್ ಹಾಗೂ ಪಿ ಸಫ್ವಾನ್ ಅವರೊಂದಿಗೆ ಷಫೀನ್ ಜಹಾನ್ ಸಂಪರ್ಕದಲ್ಲಿದ್ದ. ಒಮರ್-ಅಲ್-ಹಿಂದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಇಬ್ಬರೂ ಆರೋಪಿಗಳನ್ನು ಕಳೆದ ಅಕ್ಟೋಬರ್ ನಲ್ಲಿ ಬಂಧಿಸಿ ಎನ್ಐಎ ಚಾರ್ಜ್ ಶೀಟ್ ಹಾಕಿತ್ತು. ಒಮರ್-ಅಲ್-ಹಿಂದಿ ಎಂಬುದು ಇಸ್ಲಾಮಿಕ್ ಸ್ಟೇಟ್ ನಿಂದ ಪ್ರೇರಿತರಾದ ವ್ಯಕ್ತಿಗಳು ಹೈಕೋರ್ಟ್ ಜಡ್ಜ್ ಗಳ ಮೇಲೆ, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳು, ದಕ್ಷಿಣ ಭಾರತದ ಪ್ರಮುಖ ಪ್ರದೇಶಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲು ರೂಪಿಸಲಾಗಿದ್ದ ಕ್ರಿಮಿನಲ್ ಯೋಜನೆಗೆ ಸಂಬಂಧಿಸಿದ ಪ್ರಕರಣವಾಗಿದೆ.
ಎನ್ ಐಎ ಪ್ರಕಾರ ಹಾದಿಯಾ-ಷಫಿನ್ ಜಹಾನ್ ವಿವಾಹಕ್ಕೆ ಕಾರಣವಾಗಿದ್ದು waytonikah.com ಎಂಬ ಮ್ಯಾಟ್ರಿಮೋನಿ ವೆಬ್ ಸೈಟ್ ಅಲ್ಲ, ಬದಲಾಗಿ ಷಫಿನ್ ಜಹಾನ್ ನ ಸ್ನೇಹಿತ ಮುನೀರ್, ಮನ್ಸೀದ್ ಸೇರಿದಂತೆ ಎಸ್ ಡಿಪಿಐ ಸಹಚರರು ಈ ವಿವಾಹವನ್ನು ಏರ್ಪಡಿಸಿದರು, ಡಿಸೆಂಬರ್ 2016 ರಲ್ಲಿ ಇಬ್ಬರ ವಿವಾಹವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos