ದೇಶ

ಅಯೋಧ್ಯೆ-ರಾಮಜನ್ಮ ಭೂಮಿ ವಿವಾದ: ವಿಚಾರಣೆ ಮುಂದಿನ ವರ್ಷ ಫೆ.8ಕ್ಕೆ ಮುಂದೂಡಿಕೆ

Lingaraj Badiger
ನವದೆಹಲಿ: ದೀರ್ಘಾವಧಿಯಿಂದ ನಡೆದುಕೊಂಡು ಬಂದಿರುವ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯನ್ನು 2018ರ ಫೆಬ್ರವರಿ 8ಕ್ಕೆ ಮುಂದೂಡಿದೆ.
ಅಲಹಾಬಾದ್ ಹೈಕೋರ್ಟ್ 2010ರಲ್ಲಿ ನೀಡಿದ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ 13 ಮೇಲ್ಮನವಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಧೀಶ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಅಶೋಕ್ ಭೂಷಣ್, ಎಸ್ ಅಬ್ದುಲ್ ನಾಜಿರ್ ಒಳಗೊಂಡ ತ್ರಿಸದಸ್ಯ ಪೀಠ ವಿಚಾರಣೆಯನ್ನು ಫೆಬ್ರವರಿ 8ಕ್ಕೆ ಮುಂದೂಡಿದೆ.
ಅಯೋಧ್ಯೆಯಲ್ಲಿ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೊಹಿ ಅಕರ ಮತ್ತು ರಾಮ್ ಲಲ್ಲಾ ನಡುವೆ ಭಾಗ ಮಾಡುವಂತೆ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ತೀರ್ಪು ನೀಡಿತ್ತು.
ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಮಂಡಳಿಯ ಅಡಿಯಲ್ಲಿ ಮುಸಲ್ಮಾನರ ಗುಂಪೊಂದು, ವಿವಾದಿತ ಅಯೋಧ್ಯೆಯ ಭೂಮಿಯಿಂದ ಸ್ವಲ್ಪ ದೂರದಲ್ಲಿ ಮುಸಲ್ಮಾನರು ಹೆಚ್ಚಾಗಿರುವ ಪ್ರದೇಶದಲ್ಲಿ ಮಸೀದಿ ನಿರ್ಮಿಸಲು ಅವಕಾಶ ನೀಡಬೇಕೆಂದು ಅಲಹಾಬಾದ್ ಕೋರ್ಟ್ ಮೊರೆ ಹೋಗಿತ್ತು.
ಆದರೆ ಇದರ ಮಧ್ಯಪ್ರವೇಶವನ್ನು  ಅಖಿಲ ಭಾರತ ಸುನ್ನಿ ವಕ್ಫ್ ಮಂಡಳಿ ವಿರೋಧಿಸಿತ್ತು. 1946ರಲ್ಲಿ ಶಿಯಾ ಮತ್ತು ಸುನ್ನಿಯ ಎರಡು ಗುಂಪುಗಳ ನಡುವೆ ನ್ಯಾಯಾಂಗ ತೀರ್ಮಾನವನ್ನು ಮಾಡಲಾಗಿದ್ದು ಅದರಂತೆ ಅದು ಮಸೀದಿ ನಿರ್ಮಾಣಕ್ಕೆ ಇರುವ ಜಾಗವೆಂದು ಹೇಳಲಾಯಿತು. ಸುನ್ನಿಗೆ ಸೇರಿದ ಸ್ಥಳದಲ್ಲಿದ್ದ ಮಸೀದಿಯನ್ನು 1992, ಡಿಸೆಂಬರ್ 6ರಂದು ಕೆಡವಿ ಹಾಕಲಾಯಿತು ಎಂದು ಸುನ್ನಿ ವಕ್ಫ್ ಮಂಡಳಿ ಹೇಳುತ್ತಿದೆ.
SCROLL FOR NEXT