ನಾನು ನರೇಂದ್ರ ಭಾಯ್ ಯಂತಲ್ಲ, ಸಾಮಾನ್ಯ ಮನುಷ್ಯ, ತಪ್ಪು ಮಾಡುವುದು ಸಹಜ: ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಪ್ರಶ್ನೆ ಕೇಳುವ ಬರದಲ್ಲಿ ತಪ್ಪು ಮಾಹಿತಿ ಒಳಗೊಂಡ ಫೋಟೋವೊಂದನ್ನು ಟ್ವೀಟ್...
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಪ್ರಶ್ನೆ ಕೇಳುವ ಬರದಲ್ಲಿ ತಪ್ಪು ಮಾಹಿತಿ ಒಳಗೊಂಡ ಫೋಟೋವೊಂದನ್ನು ಟ್ವೀಟ್ ವೊಂದನ್ನು ಮಾಡಿದ್ದು ಇದರಿಂದ ರಾಹುಲ್ ಟ್ರೋಲ್ ಗೆ ಒಳಗಾಗಿದ್ದರು.
ತಕ್ಷಣ ರಾಹುಲ್ ಗಾಂಧಿ ತಾವು ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿ ಹೊಸ ಪಟ್ಟಿಯುಳ್ಳ ಟ್ವೀಟ್ ಅನ್ನು ಅಪ್ಲೋಡ್ ಮಾಡಿ ತಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದರು. ಇದೀಗ ನಾನು ನರೇಂದ್ರ ಬಾಯ್ ಯಂತಲ್ಲ. ನಾನು ಸಾಮಾನ್ಯ ಮನುಷ್ಯ, ತಪ್ಪು ಮಾಡುವುದು ಸಹಜ ಗುಣ ಎಂದು ಹೇಳಿ ಮತ್ತೊಂದು ಟ್ವೀಟ್ ಮಾಡಿ ಮೋದಿಗೆ ಟಾಂಗ್ ನೀಡಿದ್ದಾರೆ.
ರಾಹುಲ್ ಗಾಂಧಿ ಕೆಲ ದಿನಗಳ ಹಿಂದೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಪಟ್ಟಿಯನ್ನು ಟ್ವೀಟ್ ಮಾಡಿದ್ದರು. ಎಲ್ಲ ವಸ್ತುಗಳ ಬೆಲೆಯೇರಿಕೆ ಹಾಗೂ ಶೇಕಡವಾರು ಪ್ರಮಾಣವನ್ನು ತಿಳಿಸಿದ್ದರು. ಬೇಳೆ ಬೆಲೆ ಏರಿಕೆ ಹಾಗೂ ಶೇಕಡವಾರು ಪ್ರಮಾಣವನ್ನು ಮಾತ್ರ ತಪ್ಪಾಗಿ ಪ್ರಕಟಿಸಿದ್ದರು.
ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನ ಮುಂದಿನ ಅಧ್ಯಕ್ಷರಿಗೆ ಸಾಮಾನ್ಯ ಗಣಿತ ಲೆಕ್ಕ ಜ್ಞಾನವೂ ಇಲ್ಲ ಎಂಬಂತೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು.