ದೇಶ

"ನಮ್ಮ ತಾಯಿಯನ್ನು ಗೌರವಿಸದೆ ಇನ್ನೇನು ಅಫ್ಜಲ್ ಗುರುವನ್ನು ಗೌರವಿಸಬೇಕೆ?" ವೆಂಕಯ್ಯ ನಾಯ್ಡು

Raghavendra Adiga
ನವದೆಹಲಿ: "ವಂದೇ ಮಾತರಂ ನ್ನು ಗೌರವಿಸದೆ, ಇನ್ನೇನು ಅಫ್ಜಲ್ ಗುರುವನ್ನುಗೌರವಿಸುತ್ತೀರಾ?"  ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶದ ಓರ್ವ ಮೇಯರ್ ನಂತರ ಸ್ಥಳೀಯ ಪಾಲಿಕೆ ಸಭೆಗಳ ಮೊದಲಲ್ಲಿ 'ವಂದೇ ಮಾತರಂ' ಹಾಡುವುದು ಅಗತ್ಯವಲ್ಲ ಎಂದ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿಗಳು ಹೀಗೆ ಪ್ರತಿಕ್ರಯಿಸಿದ್ದಾರೆ.
"ಕೆಲವರಿಗೆ ತಮ್ಮ ತಾಯಿಗೆ ಗೌರವ ನೀಡುವುದಕ್ಕೆ ಏಕೆ ಇಷ್ಟವಿಲ್ಲವೋ ಗೊತ್ತಿಲ್ಲ. ಅಮ್ಮನಿಗೆ ಗೌರವ ನೀಡದೆ ಅಫ್ಜಲ್ ಗುರುವಿಗೆ ಗೌರವ ನೀಡಬೇಕೆ?" ನವದೆಹಲಿಯಲ್ಲಿ ವಿಎಚ್ ಪಿ ನಾಯಕ ದಿ. ಅಶೋಕ್ ಸಿಂಘಾಲ್ ಅವರ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. 
"ಹಿಂದುತ್ವ ಎಂಬುದು ನಮ್ಮ ಸಂಸ್ಕೃತಿ ಮತ್ತು ಪರಂಪರೆ. ಕೆಲವು ಜನರು ಅದಕ್ಕೆ ಸಂಕುಚಿತ ಅರ್ಥ ನೀಡುತ್ತಿದ್ದಾರೆ ಭಾರತ್ ಮಾತಾ ಕಿ ಜೈ ಎನ್ನುವುದು ಕೇವಲ ಒಂದು ಫೋಟೋಗೆ ಸೀಮಿತವಲ್ಲ. ದೇಶಕ್ಕೆ ಗೌರವ ಸೂಚಿಸುವುದು ಒಬ್ಬರ ಕೆಲಸವಲ್ಲ. 130 ಕೋಟಿ ಭಾರತೀಯರೂ ಯಾವ ಜಾತಿ, ಮತಗಳ ಭಿನ್ನಾಭಿಪ್ರಾಯಗಳಿಲ್ಲದೆ ಭಾರತವನ್ನು ಗೌರವಿಸಬೇಕಿದೆ" ನಾಯ್ಡು ಹೇಳಿದ್ದಾರೆ.
ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳಿಗೆ ನೂತನವಾಗಿ ಆಯ್ಕೆಗೊಂಡ ಬಿಎಸ್ ಪಿಯ ಮೇಯರ್ ಸುನಿತಾ ವರ್ಮಾ ಮೀರತ್ ನಲ್ಲಿ "ಜನಗಣ ಮನ ಮಾತ್ರವೇ ನಮ್ಮ ರಾಷ್ಟ್ರಗೀತೆ, ಅದನ್ನಷ್ಟೇ ಹಾಡುತ್ತೇವೆ. 'ವಂದೇ ಮಾತರಂ' ಅಲ್ಲ ಎಂದಿದ್ದರು.
SCROLL FOR NEXT