ಧನಮಾಜ್ಹಿ (ಸಂಗ್ರಹ ಚಿತ್ರ) 
ದೇಶ

ಹೆಗಲ ಮೇಲೆ ಪತ್ನಿ ಶವ ಹೊತ್ತು ಸಾಗಿ ಸುದ್ದಿಯಾಗಿದ್ದ ವ್ಯಕ್ತಿಯ ಸ್ಥಿತಿ ಹೇಗಿದೆ ಗೊತ್ತಾ?

ಈ ಹಿಂದೆ ಪತ್ನಿ ಶವ ಸಾಗಾಟಕ್ಕೆ ಹಣವಿಲ್ಲದೇ ತನ್ನ ಹೆಗಲ ಮೇಲೆ ಶವ ಹೊತ್ತು ಸಾಗುವ ಮೂಲಕ ದೇಶವ್ಯಾಪಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಒಡಿಶಾ ಮೂಲದ ಬುಡಕಟ್ಟು ಜನಾಂಗದ ಧನಮಾಜ್ಹಿ ಆರ್ಥಿಕವಾಗಿ ಸುಧಾರಣೆ ಕಂಡಿದೆ.

ಭುವನೇಶ್ವರ: ಈ ಹಿಂದೆ ಪತ್ನಿ ಶವ ಸಾಗಾಟಕ್ಕೆ ಹಣವಿಲ್ಲದೇ ತನ್ನ ಹೆಗಲ ಮೇಲೆ ಶವ ಹೊತ್ತು ಸಾಗುವ ಮೂಲಕ ದೇಶವ್ಯಾಪಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಒಡಿಶಾ ಮೂಲದ ಬುಡಕಟ್ಟು ಜನಾಂಗದ ಧನಮಾಜ್ಹಿ ಆರ್ಥಿಕವಾಗಿ  ಸುಧಾರಣೆ ಕಂಡಿದೆ.
ಮಾಧ್ಯಮಗಳಲ್ಲಿ ಸುದ್ದಿ ವೈರಲ್ ಆದ ಕಾರಣವೋ ಅಥವಾ ಸರ್ಕಾರದ ನೆರವಿನಿಂದಲೋ ಇದೀಗ ಮಾಜ್ಹಿ ಆರ್ಥಿಕವಾಗಿ ಸಾಕಷ್ಟು ಸುಧಾರಣೆ ಕಂಡಿದ್ದಾನೆ. ಪ್ರಸ್ತುತ ಮಾಜ್ಹಿ ಒಡಿಶಾದ ಕಲಾಹಂಡಿಯಲ್ಲಿ ಒಂದು ಸ್ವಂತ ಮನೆಯನ್ನು  ಹೊಂದಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಓಡಾಡಲು ಒಂದು ಸ್ವಂತ ಬೈಕ್ ಅನ್ನು ಕೂಡ ಖರೀದಿ ಮಾಡಿದ್ದು, ಇನ್ನು ಪ್ರಮುಖ ವಿತಾರವೆಂದರೆ ಮಾಜ್ಹಿ ಇದೀಗ  ಎರಡನೇ ವಿವಾಹವಾಗಿದ್ದು, ಪತ್ನಿಯೊಂದಿಗೆ ಸುಖ ಜೀವನ ನಡೆಸುತ್ತಿದ್ದು, ಆತನ ಮೂವರು ಹೆಣ್ಣುಮಕ್ಕಳು ಭುವನೇಶ್ವರದಲ್ಲಿ ಹಾಸ್ಟೆಲ್ ಇದ್ದುಕೊಂಡು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.
ಅಂದು ಧನಮಾಜ್ಹಿ ಕುರಿತ ಸುದ್ದಿ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಆತನ ಕರುಣಾಜನಕ ಕಥೆ ಕೇಳಿ ಹಲವರು ಆತನಿಗೆ ಆರ್ಥಿಕ ನೆರವು ನೀಡಿದ್ದಾರೆ, ಈ ರೀತಿ ನೆರವು ನೀಡಿದ ಹಣದ ಪ್ರಮಾಣ ಸುಮಾರು 9 ಲಕ್ಷ  ರೂಗಳಾಗಿದ್ದು, ಈ ಹಣವನ್ನು ಧನಮಾಜ್ಹಿ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದಾನೆ. 
ಅಂದು ಯಾವ ರಸ್ತೆಯಲ್ಲಿ ಹಣವಿಲ್ಲದೇ ಪತ್ನಿ ಶವವನ್ನು ಹೆಗಲ ಮೇಲೆ ಹೊತ್ತು ಸಾಗಿದ್ದನೋ ಇಂದು ಅದೇ ರಸ್ತೆಯಲ್ಲಿ ಧನಮಾಜ್ಹಿ ಬೈಕ್ ನಲ್ಲಿ ತನ್ನ ಎರಡನೇ ಪತ್ನಿಯೊಂದಿಗೆ ಓಡಾಡುತ್ತಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!