ಪ್ರಧಾನಿ ನರೇಂದ್ರ ಮೋದಿ 
ದೇಶ

'ಭಾರತವೇ ನನ್ನ ಸರ್ವಸ್ವ' , ಯೂತ್ ಕಾಂಗ್ರೆಸ್ ಮುಖಂಡನ ಟೀಕೆಗೆ ಪ್ರಧಾನಿ ಖಡಕ್ ಉತ್ತರ

"ನನ್ನ ಬಡತನದ ಹಿನ್ನೆಲೆಯ ಕುಟುಂಬ ಹಾಗೂ ನನ್ನ ಹೆತ್ತವರನ್ನು ಉಲ್ಲೇಖಿಸಿ ಅಪಹಾಸ್ಯ ಮಾಡುವ ಕಾಂಗ್ರೆಸಿಗರೇ, ಈ ರಾಷ್ಟ್ರ ನನ್ನದು. ನನ್ನ ಜೀವನದ ಪ್ರತಿ ಕ್ಷಣವೂ ......

ಲೂನವಾಡ (ಗುಜರಾತ್): "ನನ್ನ ಬಡತನದ ಹಿನ್ನೆಲೆಯ ಕುಟುಂಬ ಹಾಗೂ ನನ್ನ ಹೆತ್ತವರನ್ನು ಉಲ್ಲೇಖಿಸಿ ಅಪಹಾಸ್ಯ ಮಾಡುವ ಕಾಂಗ್ರೆಸಿಗರೇ, ಈ ರಾಷ್ಟ್ರ ನನ್ನದು. ನನ್ನ ಜೀವನದ ಪ್ರತಿ ಕ್ಷಣವೂ ಭಾರತ ಮತ್ತು 125 ಕೋಟಿ ಭಾರತೀಯರಿಗೆ ಮೀಸಲು," ಪ್ರಧಾನಿ ನರೇಂದ್ರ ಮೋದಿ ಹೇಳಿದರು.  ಯೂತ್ ಕಾಂಗ್ರೆಸ್ ಮುಖಂಡ ಸಲ್ಮಾನ್ ನಿಜಾಮಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮೋದಿಯವರ ಕುಟುಂಬದ ಹಿನ್ನೆಲೆ ತಿಳಿಸುವಂತೆ ಪ್ರಶ್ನಿಸಿದ್ದು ಈ ಕುರಿತಂತೆ ಮೋದಿ ಸ್ಪಷ್ಟನೆ ನೀಡಿದ್ದಾರೆ.
"ಯುವ ಕಾಂಗ್ರೆಸ್ ಮುಖಂದ ಸಲ್ಮಾನ್ ನಿಜಾಮಿ, ಅವರು ಗುಜರಾತಿನಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ. ಅವರು ಟ್ವಿಟ್ಟರ್ ನಲ್ಲಿ ರಾಹುಲ್ ಅವರ ತಂದೆ, ಅಜ್ಜಿ ಬಗ್ಗೆ ಬರೆದಿದ್ದಾರೆ. ಅದೇನೋ ಸರಿ ಆದರೆ ಆತ ಕೇಳುತ್ತಾನೆ - ಮೋದಿಜೀ ನಿಮ್ಮ ತಾಯಿ ಯಾರು?, ನಿಮ್ಮ ತಂದೆ ಯಾರೆಂದು ಹೇಳಿ?. ಅಂತಹ ಭಾಷೆಯನ್ನು ನಾನು ಶತ್ರುಗಳಿಗೂ ಬಳಸಲಾರೆ" ಮೋದಿ ನುಡಿದರು.
ಪ್ರಧಾನಿ ಅವರ ಹಿನ್ನೆಲೆಯನ್ನು ಯೂತ್ ಕಾಂಗ್ರೆಸ್ ನಾಯಕ ನಿಜಾಮಿ ಪ್ರಶ್ನಿಸಿದ್ದು "ರಾಹುಲ್ ಗಾಂಧಿ, ರಾಜೀವ್ ಗಾಂಧಿ ಅವರ ಪುತ್ರ. ಭಾರತಕ್ಕಾಗಿ ತಮ್ಮ ಜೀವನವನ್ನು ತ್ಯಾಗಮಾಡಿದರು. ರಾಹುಲ್ ಗಾಂಧಿ, ಇಂದಿರಾ ಗಾಂಧಿ ಅವರ ಮೊಮ್ಮಗ. ಅವರೂ ದೇಶಕ್ಕಾಗಿ ತಮ್ಮ ಜೀವನ ತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿ, ಜವಹರಲಾಲ್ ನೆಹರೂ ಅವರ ಮರಿಮಗ. ಅವರು ಭಾರತ ಸ್ವಾತಂತ್ರಕ್ಕಾಗಿ ಹೋರಾಡಿದ್ದರು. ನರೇಂದ್ರ ಮೋದಿ, ನೀವು ಯಾರ ಮಗ....? ಯಾರ ಮೊಮ್ಮಗ...?" ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಮುಂದುವರಿದು ಕಾಂಗ್ರೆಸ್ ಪಕ್ಷವನ್ನು ಸುಳ್ಳು ಭರವಸೆಗಳನ್ನು ನೀಡುವ ಮೂಲಕ ದೇಶದಲ್ಲಿ ಮುಸ್ಲಿಮರನ್ನು ದಾರಿತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ. "ರಾಷ್ಟ್ರದ ಪ್ರತಿಯೊಂದು ಭಾಗದಲ್ಲಿ ಕಾಂಗ್ರೆಸ್ ಮುಸ್ಲಿಂ ಸಮುದಾಯವನ್ನು ತಪ್ಪು ದಾರಿಗೆ ಎಳೆಯುತ್ತಿದೆ ಅವರು ಮುಸ್ಲಿಮರಿಗೆ ಮೀಸಲಾತಿಗಳ ವಿಚಾರವಾಗಿ ನಕಲಿ ಭರವಸೆಯನ್ನು ನೀಡುತ್ತಿದ್ದಾರೆ.ಆದರೆ ಯಾವುದೇ ರಾಜ್ಯದಲ್ಲಿ ಅವರು ತಮ್ಮ ಭರವಸೆಯನ್ನು ಪೂರೈಸಿಲ್ಲ" ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು