ದೇಶ

2018 ರಲ್ಲಿ ವೇತನ ಹೆಚ್ಚಳ ಉತ್ತಮವಾಗಿರಲಿದೆ: ಇಂಡಿಯಾ ಇನ್ಕ್ ವಿಶ್ವಾಸ

Srinivas Rao BV
ನವದೆಹಲಿ: ನೋಟು ನಿಷೇಧದ ಪರಿಣಾಮದಿಂದ ಸಂಕಷ್ಟ ಎದುರಿಸಿದ್ದ ಉದ್ಯೋಗ ಮಾರುಕಟ್ಟೆಯಲ್ಲಿ ಒಂದು ವರ್ಷದ ನಂತರ ವೇತನ ಹೆಚ್ಚಳ ಅತ್ಯುತ್ತಮವಾಗಿರಲಿದೆ ಎಂದು ಇಂಡಿಯಾ ಇನ್ಕ್ ವಿಶ್ವಾಸ ವ್ಯಕ್ತಪಡಿಸಿದೆ. 
2018 ರಲ್ಲಿ ಉತ್ತಮ ಪ್ರತಿಭೆಗಳಿಗೆ ಶೇ.10-15 ರಷ್ಟು ವೇತನ ಹೆಚ್ಚು ಸಿಗಲಿದೆ, ವರ್ಕ್ ಪ್ರೊಫೈಲ್ ಅಗತ್ಯತೆಗಳಿಗೆ ತಕ್ಕಂತೆ ತಮ್ಮನ್ನು ತಾವು ಬದಲಾವಣೆ ಮಾಡಿಕೊಳ್ಳುವವರಿಗೆ 2018 ರಲ್ಲಿ ಉತ್ತಮ ಅವಕಾಶಗಳು ಸಿಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಇನ್ನು 2017 ರಲ್ಲಿ ಉಂಟಾಗಿದ್ದ ಉದ್ಯೋಗ ಕಡಿತಕ್ಕೆ ಸಂಬಂಧಿಸಿದಂತ್ಕೆ ಶೇ.60 ರಷ್ಟು ಪ್ರಮುಖ ಸಂಸ್ಥೆಗಳು ಸಿಬ್ಬಂದಿಗಳನ್ನು ಇದ್ದಷ್ಟೇ ಸಂಖ್ಯೆಯಲ್ಲಿ ಮುಂದುವರೆಸಿದ್ದವು, ಶೇ.20 ರಷ್ಟು ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಿದ್ದವು, ಆದರೆ ಐಟಿ, ಟೆಲಿಕಾಂ, ಉತ್ಪಾದನೆ, ಇಂಜಿನಿಯರಿಂಗ್ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ನೋಟು ನಿಷೇಧದ ನಂತರ ಉದ್ಯೋಗ ಕಡಿತೆ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಿತ್ತು, ನೋಟುನಿಷೆಧಕ್ಕೆ ಒಂದು ವರ್ಷವಾಗಿದ್ದು  2018 ರಲ್ಲಿ ವೇತನ ಹೆಚ್ಚಳ ಉತ್ತಮವಾಗಿರಲಿದೆ ಎಂದು ಇಂಡಿಯಾ ಇನ್ಕ್ ಹೇಳಿದೆ.
SCROLL FOR NEXT