ಲಾಲ್ ಜೀ ಸಿಂಗ್ 
ದೇಶ

ಭಾರತದ ಡಿಎನ್ ಎ ಬೆರಳಚ್ಚು ಮುದ್ರಕ ಪಿತಾಮಹ ಲಾಲ್ ಜೀ ಸಿಂಗ್ ನಿಧನ

ಖ್ಯಾತ ವಿಜ್ಞಾನಿ ಹಾಗೂ ಭಾರತದ ಡಿಎನ್ ಎ ಬೆರಳಚ್ಚು ಮುದ್ರಕ ಪಿತಾಮಹ ಲಾಲ್ ಜೀ ಸಿಂಗ್ ಮರಣ ಹೊಂದಿದ್ದಾರೆ

ಲಖ್ನೋ: ಖ್ಯಾತ ವಿಜ್ಞಾನಿ ಹಾಗೂ ಭಾರತದ ಡಿಎನ್ ಎ ಬೆರಳಚ್ಚು ಮುದ್ರಕ ಪಿತಾಮಹ ಲಾಲ್ ಜೀ ಸಿಂಗ್ ಮರಣ ಹೊಂದಿದ್ದಾರೆ. ವಾರಣಾಸಿ ವಿಮಾನ ನಿಲ್ದಾಣದಲ್ಲಿದ್ದ ಸಮಯ ತೀವ್ರ ಹ್ದಯಾಘಾತದಿಂದ  ಅವರು ಸಾವನ್ನಪ್ಪಿದರು . ಅವರಿಗೆ 70  ವರ್ಷ ವಯಸ್ಸಾಗಿತ್ತು. 
ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿಗಳಾಗಿದ್ದ ಇವರು ದೆಹಲಿಗೆ ತೆರಳುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ಅವರನ್ನು ಬಿ ಎಚ್ ಯು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮರಣ ಹೊಂದಿದ್ದಾರೆ.. 
ಸಿಂಗ್ ಅವರು ಹೈದರಾಬಾದ್ ನ ಸೆಲ್ಯುಲರ್ ಮತ್ತು ಮಾಲಿಕ್ಯೂಲರ್ ಬಯಾಲಜಿ ಕೇಂದ್ರ (ಸಿಸಿಎಂಬಿ) ದ ಸಂಸ್ಥಾಪಕರು, ಹಾಗೂ ಇವರು ಅಂಡಮಾನ್ ನಿಕೋಬಾರ್ ನ ಬುಡಕಟ್ಟು ಜನರಿಗೆ ನೀಡಿದ್ದ ಸಹಾಯಕ್ಕಾಗಿ ಅಂತರಾಷ್ಟ್ರೀಯ ಮೆಚ್ಚುಗೆಗೆ ಪಾತ್ರರಾಗಿದ್ದರು.ಇವರು 1998  ಹಾಗೂ 2009.ರ ನಡುವೆ ಸಿಸಿಎಂಬಿ ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಬಿಎಚ್ ಯು ನ ಉಪ ಕುಲಪತಿಗಳಾಗಿ ಸಿಂಗ್ 2011 ರಲ್ಲಿ ನೇಮಕಗೊಂಡು 2014.ರವರೆಗೆ ಆ ಸ್ಥಾನದಲ್ಲಿ ಕೆಲಸ ಮಾಡಿದ್ದರು.
ಲಾಲ್ ಜೀ ಸಿಂಗ್ ಅವರ ನಿಧನಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್