ದೇಶ

2018 ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಆಸಿಯಾನ್ ರಾಷ್ಟ್ರಗಳ ಹತ್ತು ಗಣ್ಯರು!

Raghavendra Adiga
ನವದೆಹಲಿ: ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಟನೆ (ಆಸಿಯಾನ್) ಸದಸ್ಯ ರಾಷ್ಟ್ರಗಳ ಕನಿಷ್ಟ 10 ನಾಯಕರು 2018 ರ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿದೆ  ಪ್ರಧಾನಿ ನರೇಂದ್ರ ಮೋದಿ ತಾವು ಆಸಿಯಾನ್ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಿದ್ದಾರೆ.
ಫಿಲಿಫೈನ್ಸ್ ನ ಮನೀಲಾ ದಲ್ಲಿ ನಡೆದ 15 ನೇ ಆಸಿಯಾನ್ ಇಂಡಿಯಾ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ಮೋದಿ ಅವರು ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಮಾತುಕತೆಗಳಲ್ಲಿ ಸಕ್ರಿಯವಾಗಿದ್ದರು. ಇತ್ತೀಚೆಗೆ ವಿದೇಶಾಂಗ ಕಾರ್ಯದರ್ಶಿ ಸುಬ್ರಹ್ಮಣ್ಯಂ ಜೈಶಂಕರ್ ಅವರು, ಆಸಿಯಾನ್ ಮತ್ತು ಪೂರ್ವ ಏಷ್ಯಾದೊಂದಿಗಿನ ಭಾರತದ ಸಹಭಾಗಿತ್ವವನ್ನು ಮಹತ್ವದ್ದೆಂದು ಪರಿಗಣಿಸುವಂತೆ ಹೇಳಿದ್ದರು.
"ಆಸಿಯಾನ್ ಮತ್ತು ಪೂರ್ವ ಏಷ್ಯಾಗಳೊಂದಿಗಿನ ಸಂಬಂಧವು ಸಹಜವಾಗಿ, ಸುಧಾರಣೆಯ ಹಾದಿಯಲ್ಲಿದೆ. .ಈ ದೇಶಗಳು ವ್ಯಾಪಾರ ಮತ್ತು ಹೂಡಿಕೆಯಲ್ಲಿ ಪಾಲುದಾರಿಕೆಯನ್ನು ಹೊಂದುವುದರ ಮೂಲಕ ಬದಲಾವಣೆಯ ಸೂತ್ರಧಾರಿಗಳಾಗಿವೆ." ಪಿಎಚ್ ಡಿ ರಾಯಭಾರಿ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಜೈಶಂಕರ್ ಹೇಳಿದ್ದಾರೆ.
ಶೃಂಗಸಭೆಯಲ್ಲಿ ಭಾಷಣ ಮಾಡುವಾಗ ಭಯೋತ್ಪಾದನೆ ವಿರುದ್ಧ ಹೋರಾಡಲು ಹೆಚ್ಚಿನ ಸಹಕಾರವನ್ನು ನೀಡಲು ಪ್ರಧಾನಿ ಮೋದಿ ಆಸಿಯಾನ್ ರಾಷ್ಟ್ರಗಳಿಗೆ ಸಲಹೆ ಮಾಡಿದ್ದರು. ಪ್ರಾಂತೀಯ ಭದ್ರತೆಯನ್ನು ಕಾಪಾಡಿಕೊಳ್ಳಲು ಆಸಿಯಾನ್ ರಾಷ್ಟ್ರಗಳಿಗೆ ಭಾರತದ ಸಂಪೂರ್ಣ ಸಹಕಾರದ ಭರವಸೆಯನ್ನು ಮೋದಿ ನೀಡಿದ್ದರು.
SCROLL FOR NEXT