ದೇಶ

ಜಯಾ ಸ್ವಕ್ಷೇತ್ರದಲ್ಲಿ ಉಪಚುನಾವಣೆ: ಆರ್ ನಗರದಲ್ಲಿ ಮತದಾನ ಆರಂಭ

Srinivasamurthy VN
ಚೆನ್ನೈ: ತೀವ್ರ ಕುತೂಹಲ ಕೆರಳಿಸಿರುವ ಮತ್ತು ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಸ್ವಕ್ಷೇತ್ರ ಆರ್ ಕೆನಗರ ಉಪಚುನಾವಣೆಯ ಮತದಾನ ಆರಂಭವಾಗಿದ್ದು,  ಬೆಳಗ್ಗಿನಿಂದಲೇ ಆರ್ ಕೆ ನಗರದ ಮತದಾರರು ಸಾಲುಗಟ್ಟಿ ಮತದಾನ ಮಾಡುತ್ತಿದ್ದಾರೆ.
ಮತದಾರರಿಗೆ ಹಣ ಹಂಚಿಕೆ, ರಾಜಕೀಯ ಪಕ್ಷಗಳ ಮಾರಾಮಾರಿಯಂತಹ ಪ್ರಕರಣಗಳು ದಾಖಲಾದ ಹಿನ್ನಲೆಯಲ್ಲಿ ಇಂದಿನ ಮತದಾನ ಪ್ರಕ್ರಿಯೆಗೆ ಅಭೂತಪೂರ್ವ ಭದ್ರತೆ ಕಲ್ಪಿಸಲಾಗಿದೆ. ಹಿಂದೆಂದೂ ಕಂಡು ಕೇಳರಿಯದ  ರೀತಿಯಲ್ಲಿ ಈ ಹಿಂದೆ ಆರ್ ಕೆ ನಗರದಲ್ಲಿ ಭಾರಿ ಪ್ರಮಾಣದ ಚುನಾವಣಾ ಪ್ರಚಾರ ನಡೆದಿತ್ತು. ಜಯಾ ಸಾವಿನ ಬಳಿಕ ಇಬ್ಭಾಗವಾಗಿದ್ದ ಎಐಎಡಿಎಕೆ ಪಕ್ಷ ಮತ್ತೆ ಒಂದಾಗಿದೆಯಾದರೂ ಶಶಿಕಲಾ ಬಣವನ್ನು ಪಕ್ಷದಿಂದ ದೂರವಿಟ್ಟಿದೆ.  ಹೀಗಾಗಿ ಈ ಹಿಂದೆ ಇದ್ದ ಎದುರಾಳಿಗಳ ಸಂಖ್ಯೆ ಇದೀಗ ಮೂರಕ್ಕೆ ಏರಿಕೆಯಾಗಿದ್ದು, ಡಿಎಂಕೆ, ಎಐಎಡಿಎಂಕೆ ಮತ್ತು ಶಶಿಕಲಾ ಬಣದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಪ್ರಮುಖವಾಗಿ ಈ ಚುನಾವಣೆಯನ್ನು ಜಯಲಲಿತಾ ಅವರ ಉತ್ತರಾಧಿಕಾರದಂತೆ ನೋಡಲಾಗುತ್ತಿದ್ದು, ಇದೇ ಕಾರಣಕ್ಕೆ ಶಶಿಕಲಾ ಬಣ ಹಾಗೂ ಪನ್ನೀರ್ ಸೆಲ್ವಂ ಹಾಗೂ ಸಿಎಂ ಪಳನಿಸ್ವಾಮಿ ಬಣ ಪ್ರತಿಷ್ಠೆಯಾಗಿ ಪರಿಗಣಿಸಿವೆ.
ಇದೇ ಡಿಸೆಂಬರ್ 24ರಂದು ಮತಎಣಿಕೆ ಕಾರ್ಯ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
SCROLL FOR NEXT