ಮೀರುತ್: ತ್ರಿವಳಿ ತಲಾಖ್ ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಅಂತಿಮ ಸಿದ್ಧತೆಯಲ್ಲಿರುವಾಗಲೇ ಉತ್ತರ ಪ್ರದೇಶದಲ್ಲಿ ಪತಿಯ ನೀಚ ಕೃತ್ಯಕ್ಕೆ ಮಹಿಳೆಯೋರ್ವಳ ಜೀವನ ಹೀನಾಯ ಸ್ಥಿತಿಗೆ ತಲುಪಿದೆ.
ಮದುವೆಯಾದ ಬೆನ್ನಲ್ಲೇ ನೀಚ ಪತಿ ಸೇರಿದಂತೆ ಮೂವರು ಕಾಮುಕರು 24 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಹೇಯ ಕೃತ್ಯ ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ನಡೆದಿದೆ. ಅಷ್ಟು ಮಾತ್ರವಲ್ಲದೇ ಮದುವೆಯಾದ ಒಂದೇ ವಾರಕ್ಕೆ ಪತ್ನಿಗೆ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ. ಪ್ರಕರಣ ಸಂಬಂಧ ಸಂಬಂಧ ಆರೋಪಿ ಪತಿ ಹಾಗೂ ಆತನ ಸಹೋದರರು ಸೇರಿದಂತೆ ಮೂವರ ವಿರುದ್ಧ ಸಂತ್ರಸ್ತ ಮಹಿಳೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇದೇ ಡಿಸೆಂಬರ್ 1ರಂದು ಸಂತ್ರಸ್ಥ ಮಹಿಳೆ ಆರೋಪಿ ಮೊಹಮ್ಮದ್ ರಶೀದ್ ಎಂಬುವನನ್ನು ವಿವಾಹವಾಗಿದ್ದರು. ಘಚನೆ ಸಂಬಂಧ ದೂರಿನಲ್ಲಿ ಪತಿ ಸಹೋದರ ಮತ್ತು ಆತನ ಸ್ನೇಹಿತನ ವಿರುದ್ಧ ಅತ್ಯಾಚಾರ ದೂರು ನೀಡಿರುವ ಮಹಿಳೆ, "ಮದುವೆಯಾದ ಮಾರನೇ ದಿನ ಬೆಡ್ ರೂಮ್ ನಲ್ಲಿ ಪತಿಗಾಗಿ ಕಾಯುತ್ತಿದ್ದೆ. ಈ ವೇಳೆ ಪತಿಯ ಸಹೋದರ ಮೊಹಮ್ಮದ್ ರಖೀಬ್ ಹಾಗೂ ಆತನ ಸ್ನೇಹಿತ ಬೆಡ್ ರೂಮ್ ಗೆ ನುಗ್ಗಿ ಅತ್ಯಾಚಾರ ಎಸಗಿದರು. ಅಲ್ಲದೆ ಕೃತ್ಯದ ವೀಡಿಯೋ ಮಾಡಿದ್ದಾರೆ. ಈ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು. ಘಟನೆ ಸಂಬಂಧ ಪತಿ ರಶೀದ್ ಗೆ ದೂರು ನೀಡಿದರೆ, ಆತ ಪತ್ನಿಯ ಸಹಾಯಕ್ಕೆ ನಿಲ್ಲದೆ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಮೊದಲ ಪತ್ನಿ ಇರುವಾಗ ಮತ್ತೊಂದು ಮದುವೆಯಾಗಲು ಹೇಗೆ ಸಾಧ್ಯ: ಆರೋಪಿ ಪತಿಯ ತಾಯಿಯ ವಾದ
ಇನ್ನು ಈ ವಿಚಾರ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಈ ಬಗ್ಗೆ ಹೇಳಿಕೆ ನೀಡಿರುವ ಆರೋಪಿ ರಶೀದ್ ತಾಯಿ, " 'ನನ್ನ ಮಕ್ಕಳು ಅಮಾಯಕರು. ಈಗಾಗಲೇ ಮಹಮದ್ ರಶೀದ್ ಗೆ ವಿವಾಹವಾಗಿದ್ದು, ಆತನ ಇನ್ನೊಂದು ವಿವಾಹದ ಬಗ್ಗೆ ಮಾಹಿತಿಯೇ ಇಲ್ಲ. ಆತನಿಗೆ ಮೊದಲ ಪತ್ನಿ ಇರುವಾಗ ಇನ್ನೊಬ್ಬ ಮಹಿಳೆಯನ್ನು ವಿವಾಹವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರು ಬುಲಂದ್ ಶಹರ್ ಪೊಲೀಸರು ಪ್ರಾಥಮಿಕ ನಡೆಸಿದ್ದು, "ಆರೋಪಿ ರಶೀದ್ ಹಾಗೂ ಸಂತ್ರಸ್ತ ಮಹಿಳೆಯ ನಡುವೆ ನಿಖಾನಾಮಾ ಮಾತ್ರ ನಡೆದಿದೆ. ಇವರಿಬ್ಬರ ವಿವಾಹದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಪ್ರಕರಣ ಸಂಬಂಧ ತನಿಖೆ ಮಾಡುತ್ತೇವೆ ಎಂದು ಬುಲಂದ್ ಶಹರ್‌ನ ಕೊಟ್ಟಾಲಿ ಪೊಲೀಸ್ ಠಾಣಾಧಿಕಾರಿ ಧನಂಜಯ್ ಮಿಶ್ರಾ ತಿಳಿಸಿದ್ದಾರೆ.