ಮುಂಬೈ: 2 ಜಿ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ನೀಡಿರುವ ತೀರ್ಪನ್ನು ಬಿಜೆಪಿಗೆ ದೊರೆತ ತಪರಾಕಿ ಎಂದು ಹೇಳಿರುವ ಶಿವಸೇನೆ, ಮಾಜಿ ಸಿಎಜಿ ವಿನೋದ್ ರಾಯ್ ಈ ಬಗ್ಗೆ ವಿವರಣೆ ನೀಡಬೇಕೆಂದು ಹೇಳಿದೆ.
2 ಜಿ ಹಗರಣವನ್ನು ಸೃಷ್ಟಿಸುವುದರ ಹಿಂದೆ ರಾಯ್ ಅವರಿಗಿದ್ದ ಉದ್ದೇಶವನ್ನು ಪ್ರಶ್ನಿಸಿರುವ ಶಿವಸೇನೆ, ವಿನೋಡ್ ರಾಯ್ ಅವರು ಸತ್ಯದ ಹಾದಿಯಲ್ಲಿ ನಡೆದಿಲ್ಲ, ಈಗ ಹಗರಣಕ್ಕೆ ಸಂಬಂಧಿಸಿದಂತೆ ವಿನೋದ್ ರಾಯ್ ಅವರ ನಡೆಯ ಬಗ್ಗೆಯೇ ಅನುಮಾನಗಳು ವ್ಯಕ್ತವಾಗುತ್ತಿದೆ ಎಂದು ಹೇಳಿದೆ.
ರಾಯ್ ಅವರು ಪಟ್ಟ ಭದ್ರ ಹಿತಾಸಕ್ತಿ ಹೊಂದಿದ್ದ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಕೋರ್ಟ್ ತೀರ್ಪಿನಿಂದ ಈಗ ರಾಯ್ ಅವರು ಸಂಪೂರ್ಣವಾಗಿ ಎಕ್ಸ್ ಪೋಸ್ ಆಗಿದ್ದು, ಅವರು ತಮ್ಮ ಅಧಿಕೃತ ಪದವಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಸಾಬೀತಾಗಿದೆ, 2ಜಿ ಹರಣದ ಬಗ್ಗೆ ವಿನೋದ್ ರಾಯ್ ಈಗ ವಿವರಣೆ ನೀಡಬೇಕಿದೆ ಎಂದು ಎಂದು ಶಿವಸೇನೆ ಆಗ್ರಹಿಸಿದೆ.