ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ವನ್ನು ಟೀಕೆ ಮಾಡಿ ಪಕ್ಷವು ಚಲನಚಿತ್ರದ ಫ್ರಾಂಚೈಸಿಯನ್ನೇನಾದರೂ ಹೊಂದಿದ್ದರೆ ಅದನ್ನು 'ಲೈ ಹಾರ್ಡ್' ಎಂದು ಕರೆಯಬಹುದು ಎಂದಿದ್ದಾರೆ.
ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ನಲ್ಲಿ "ಬಿಜೆಪಿ ಚಿತ್ರದ ಫ್ರಾಂಚೈಸಿ ಹೊಂದಿದ್ದರೆ ಅದನ್ನು 'ಲೈ ಹಾರ್ಡ್' ಎನ್ನಬಹುದಾಗಿದೆ. ಎಂದು ಬರೆದುಕೊಂಡಿದ್ದಾರೆ. ಬಿಜೆಪಿಯವರದು ಸುಳ್ಳಿನ ಕಂತೆ. ಅವರದ್ದು ಸುಳ್ಳುಗಳ ಪಕ್ಷ ಎಂದು ಹೇಳುವ ಸಲುವಾಗಿ ರಾಹುಲ್ ಹಾಲಿವುಡ್ ಚಿತ್ರದ ಶಿರ್ಷಿಕೆಯನ್ನು ಬಳಸಿಕೊಂಡಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಹೊಸದಾಗಿ ಚುನಾಯಿತರಾದ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿರುವ ರಾಹುಲ್ ಇಂದು ಸೋಮನಾಥ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ನವೆಂಬರ್ 29 ರಂದು ರಾಹುಲ್ ಸೋಮನಾಥ ಭೇಟಿಯು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ರಾಹುಲ್ ಹೆಸರು ದೇವಾಲಯದ ಪುಸ್ತಕದಲ್ಲಿ ಹಿಂದೂಯೇತರರ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು.