ಕಾಫಿ ಹೌಸ್ ಗೆ ಪ್ರಧಾನಿಗಳ ಅಚ್ಚರಿಯ ಭೇಟಿ 
ದೇಶ

ಹಿಮಾಚಲ ಪ್ರದೇಶ: ಕಾಫಿ ಹೌಸ್ ಗೆ ಪ್ರಧಾನಿಗಳ ಅಚ್ಚರಿಯ ಭೇಟಿ

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮತ್ತು ಇತರರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡು ಹಿಂತಿರುಗುವ ವೇಳೆ ........

ಶಿಮ್ಲಾ: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮತ್ತು ಇತರರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡು ಹಿಂತಿರುಗುವ ವೇಳೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಾಲಿ ರಸ್ತೆಯಲ್ಲಿ ತಮ್ಮ ಪ್ರಯಣಕ್ಕೆ ಶಾರ್ಟ್ ಬ್ರೇಕ್ ನೀಡಿದ್ದರು. 
ಹಿಮಾಚಲ ಪ್ರದೇಶದ ಹೊಸ ಸಚಿವಸಂಪುಟ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಹೆಲಿಪ್ಯಾಡ್ ಗೆ ತೆರಳುವ ಮುನ್ನ ಪ್ರಖ್ಯಾತ ಇಂಡಿಯನ್ ಕಾಫಿ ಹೌಸ್ ನಲ್ಲಿ ಪ್ರಧಾನಿ ಮೋದಿ ಕಾಫಿ ಸವಿದರು.
ವಿಶೇಷವೆಂದರೆ ಹಲವು ವರ್ಷಗಳ ಹಿಂದೆ ಪಕ್ಷದ ಕೆಲಸಗಳಿಗಾಗಿ ಹಿಮಾಚಲಪ್ರದೇಶದಲ್ಲಿದ್ದ ಸಮಯದಲ್ಲಿ ಮೋದಿ ಆಗಾಗ ತಮ್ಮ ಸ್ನೇಹಿತರನ್ನು ಕಾಣಲು ಈ ಕಾಫಿ ಹೌಸ್ ಗೆ ಆಗಮಿಸುತ್ತಿದ್ದರು. 
ಮಾಲಿ ರಸ್ತೆಯಲ್ಲಿ ಕಾಫಿ ಹೀರುತ್ತಿರುವ ಪ್ರಧಾನಿ ಮೋದಿ ಅವರನ್ನು ನೋಡಿದಾಗ ಜನರು ಅಚ್ಚರಿಗೊಂಡರು. ಅವರಲ್ಲಿ ಕೆಲವರು ಪ್ರಧಾನಿಗಳಿಗೆ ಹಸ್ತಲಾಗವ ಮಾಡಿದರೆ ಇನ್ನೂ ಕೆಲವರು ಅವರೊಡನೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

60 ದಿನಗಳ ಕದನ ವಿರಾಮ ವಿಸ್ತರಣೆಗೆ ಅಮೆರಿಕ, ಇರಾನ್ ಸಂಧಾನಕಾರರು ಒಪ್ಪಿಗೆ; ಟ್ರಂಪ್ ಅನುಮೋದನೆ ಬಾಕಿ

ಕರ್ನಾಟಕ ನಾಯಕತ್ವ ಬದಲಾವಣೆಯ ನಡುವೆ CM ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತೆ ದೆಹಲಿಗೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ; ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧವೇ ಅತ್ಯಾಚಾರ ಯತ್ನ ಆರೋಪ, ಮಾನನಷ್ಟ ಮೊಕದ್ದಮೆ: ಕಣ್ಣೀರಿಟ್ಟು ಕ್ಷಮೆ ಕೇಳಿದ 'ಹಳ್ಳಿಮೇಷ್ಟ್ರು' ನಟಿ Bindiya!

Karnataka CM News LIVE Updates | ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ; ಸಿಎಲ್‌ಪಿ ಸಭೆ ಶನಿವಾರ ಸಾಧ್ಯತೆ!

SCROLL FOR NEXT