ದೇಶ

ಸೆಕ್ಯುಲರ್ ಆಗಿ ಬದಲಾದ ರಾಷ್ಟ್ರಪತಿ ಭವನ: ಕೆರೋಲ್, ದೀಪಾವಳಿ, ಇಫ್ತಾರ್ ಗೆ ಬ್ರೇಕ್

Lingaraj Badiger
ನವದೆಹಲಿ: ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕ್ರಿಸ್ಮಸ್ ಹಬ್ಬದಂದು ಈ ವರ್ಷ ಕೆರೋಲ್ ಗಾಯನ ನಿಲ್ಲಿಸಲಾಗಿದೆ. ಈ ಹಿಂದೆ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿ ಐದು ವರ್ಷಗಳ ಕಾಲ ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಹಾಗ ಕರೋಲ್ ಗಾಯನ ನಡೆಯುತ್ತಿತ್ತು.
ಈಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕರೋಲ್ ಗಾಯನಕ್ಕೆ ಬ್ರೇಕ್ ಹಾಕಿದ್ದು, ಅವರ ಅವಧಿಯಲ್ಲಿ ಇಫ್ತಾರ ಕೂಟ ಹಾಗೂ ದೀಪಾವಳಿ ಆಚರಣೆಗೂ ಬ್ರೇಕ್ ಹಾಕಲು ಮುಂದಾಗಿದ್ದು, ಈಗ ರಾಷ್ಟ್ರಪತಿ ಭವನ ಜಾತ್ಯತೀತವಾಗಿ ಬದಲಾಗುತ್ತಿದೆ.
ಕಲಾಂ ರಾಷ್ಟ್ರಪತಿಯಾಗಿದ್ದಾಗ ಇಫ್ತಾರ ಕೂಟ ರದ್ದುಗೊಳಿಸಲಾಗಿತ್ತು. ಆದರೆ ಪ್ರತಿಭಾ ಪಾಟೀಲ್ ಅವರು ರಾಷ್ಟ್ರಪತಿಯಾದ ನಂತರ ಅದು ಮತ್ತೆ ಮುಂದುವರೆದಿತ್ತು. ಆದರೆ ಇದುವರೆಗೂ ಕೆರೋಲ್ ಗಾಯನ ನಿಂತಿರಲಿಲ್ಲ. ಒಂದೇ ಒಂದು ಬಾರಿ ಮುಂಬೈ ದಾಳಿಯ ಹಿನ್ನೆಲೆಯಲ್ಲಿ ಮಾತ್ರ ರಾಷ್ಟ್ರಪತಿ ಭವನದಲ್ಲಿ ಕೆರೋಲ್ ಗಾಯನ ರದ್ದುಗೊಳಿಸಲಾಗಿತ್ತು. 
ರಾಷ್ಟ್ರಪತಿ ಭವನದಲ್ಲಿ ಸಾಮಾನ್ಯವಾಗಿ ಎಲ್ಲಾ ಧಾರ್ಮಿಕ ಆಚರಣೆಗಳು ನಡೆಯುತ್ತಿದ್ದವು. ಕೆಲವು ಬಾರಿ ಕೆಲ ಧಾರ್ಮಿಕ ಹಬ್ಬಗಳ ಆಚರಣೆ ರದ್ದುಗೊಳಿಸಲಾಗಿತ್ತು. ಆದರೆ ಈಗ ಎಲ್ಲಾ ಧಾರ್ಮಿಕ ಹಬ್ಬಗಳ ಆಚರಣೆಯನ್ನು ಕೈಬಿಡಲಾಗುತ್ತಿದೆ.
ಈ ವರ್ಷ ರಾಷ್ಟ್ರಪತಿ ಭವನದಲ್ಲಿ ದೀಪಾವಳಿ ಆಚರಿಸಲಾಗಿಲ್ಲ. ರಾಷ್ಟ್ರಪತಿ ಭವನಕ್ಕೆ ಕೇವಲ ಎಲ್ ಇಡಿ ದೀಪಾಲಂಕರ ಮಾತ್ರ ಮಾಡಲಾಗಿತ್ತು. ಈಗ ಕೆರೋಲ್ ಗಾಯನವನ್ನು ಕೈಬಿಡಲಾಗಿದ್ದು, ಮುಂದೆ ಇಫ್ತಾರ್ ಕೂಟ ಸಹ ರದ್ದುಗೊಳ್ಳಲಿದೆ.
SCROLL FOR NEXT