ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ 
ದೇಶ

ಹೆಚ್ 1-ಬಿ ವೀಸಾದಡಿ ಭಾರತೀಯರನ್ನು ಕಳುಹಿಸುವುದನ್ನು ನಿಲ್ಲಿಸಿ, ಸ್ಥಳೀಯರನ್ನು ನೇಮಿಸಿ: ನಾರಾಯಣ ಮೂರ್ತಿ

ಹೆಚ್1-ಬಿ ವೀಸಾ ಮೂಲಕ ಭಾರತೀಯ ಉದ್ಯೋಗಿಗಳನ್ನು ಬರಮಾಡಿಕೊಳ್ಳುವುದನ್ನು ಭಾರತೀಯ...

ನವದೆಹಲಿ: ಹೆಚ್1-ಬಿ ವೀಸಾ ಮೂಲಕ ಭಾರತೀಯ ಉದ್ಯೋಗಿಗಳನ್ನು ಬರಮಾಡಿಕೊಳ್ಳುವುದನ್ನು ಭಾರತೀಯ ಸಾಫ್ಟ್ ವೇರ್ ಕಂಪೆನಿಗಳು ನಿಲ್ಲಿಸಿ ಅಮೆರಿಕಾದಲ್ಲಿರುವ ಸ್ಥಳೀಯರನ್ನು ನೇಮಿಸುವ ಬಗ್ಗೆ ಗಮನ ಹರಿಸಬೇಕೆಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಹೇಳಿದ್ದಾರೆ. 
ವಿದೇಶಿ ನೌಕರರು ಅಮೆರಿಕಾ ಪ್ರವೇಶಿಸುವುದನ್ನು ತಡೆಯಲು ಹೆಚ್ 1-ಬಿ ವೀಸಾಕ್ಕೆ ನಿರ್ಬಂಧ ಹೇರುವ ಡೊನಾಲ್ಡ್ ಟ್ರಂಪ್ ಆಡಳಿತದ ಪ್ರಸ್ತಾವನೆ ಕುರಿತು ಉದ್ಭವಿಸಿರುವ ಸಮಸ್ಯೆಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಮೃದು ಧೋರಣೆ ಹೊಂದುವುದು ಭಾರತೀಯರ ಮನೋಧರ್ಮವಾಗಿದೆ. ಹಾಗೆಂದು ಬಹು ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ, ಅದು ಬಹಳ ಕಠಿಣವಾದ ಆಯ್ಕೆ ಎಂದು ಹೇಳಿದ್ದಾರೆ.
ಅಮೆರಿಕಾದಲ್ಲಿರುವ ಭಾರತೀಯ ಕಂಪೆನಿಗಳು ಅಮೆರಿಕನ್ನರನ್ನು, ಕೆನಡಾದಲ್ಲಿ ಕೆನಡಿಯನ್ನರನ್ನು, ಬ್ರಿಟನ್ ನಲ್ಲಿ ಇಂಗ್ಲೆಂಡಿಗರನ್ನು ನೇಮಿಸಬೇಕು. ಅದೊಂದೇ ಉಳಿದಿರುವ ಮಾರ್ಗವಾಗಿದೆ, ಆ ಮೂಲಕವೇ ನಾವು ಬಹುರಾಷ್ಟ್ರೀಯ ಕಂಪೆನಿಗಳೆಂದು ಗುರುತಿಸಿಕೊಳ್ಳಬಹುದು. ಹೆಚ್ 1-ಬಿ ವೀಸಾ ಮೂಲಕ ಬಹು ಸಂಖ್ಯೆಯಲ್ಲಿ ಭಾರತೀಯರನ್ನು ಕಳುಹಿಸುವುದನ್ನು ನಿಲ್ಲಿಸಬೇಕು ಎಂದು ನಾರಾಯಣ ಮೂರ್ತಿ ಇಂಗ್ಲೀಷ್ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಭಾರತೀಯ ಕಂಪೆನಿಗಳಿಗೆ ಹೆಚ್ಚಿನ ಮೌಲ್ಯ ಉಂಟಾಗಲು, ಉತ್ತಮ ಕೆಲಸಗಾರರನ್ನು ನೇಮಿಸಿಕೊಳ್ಳಲು ಕಾಲೇಜುಗಳಿಂದ ಯುವಕ,ಯುವತಿಯರನ್ನು ನೇಮಕ ಮಾಡಿಕೊಳ್ಳಬೇಕು ಮತ್ತು ಸ್ಥಳೀಯರಿಗೆ ತರಬೇತಿ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ವೀಸಾಕ್ಕೆ ಸಂಬಂಧಪಟ್ಟ ಆದೇಶ ಕಾನೂನಾಗಿ ಜಾರಿಗೆ ಬಂದರೂ ಕೂಡ ಅದನ್ನು ಲೋಪವಾಗಿ ನೋಡದೆ ಭಾರತೀಯ ಕಂಪೆನಿಗಳಿಗೆ ಬಹು ಸಂಸ್ಕೃತಿ ಅಳವಡಿಕೆಗೆ ಉತ್ತಮ ಅವಕಾಶ ಎಂಬ ದೃಷ್ಟಿಯಿಂದ ನೋಡಬೇಕು ಎಂದು ಮೂರ್ತಿ ನುಡಿದರು.
ಡೊನಾಲ್ಡ್ ಟ್ರಂಪ್ ಅವರ ಹೊಸ ಕಾರ್ಯಕಾರಿ ಆದೇಶದ ಬಗ್ಗೆ ಅಲ್ಲಿನ ಭಾರತೀಯ ಕಂಪೆನಿಗಳಿಗೆ ಅಷ್ಟೊಂದು ಆತಂಕವೇಕೆ ಎಂದು ಕೇಳಿದಾಗ ಭಾರತೀಯ ಕಂಪೆನಿಗಳು ವಿದೇಶಿಗರೊಂದಿಗೆ ಕೆಲಸ ಮಾಡುವುದನ್ನು ಕಲಿಯಬೇಕು ಮತ್ತು ಇನ್ನಷ್ಟು ಬಹು ಸಂಸ್ಕೃತಿಗೆ ತೆರೆದುಕೊಳ್ಳುವ ಸವಾಲುಗಳಿರುತ್ತವೆ ಎಂದರು.
ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉದ್ದೇಶಿತ ಹೆಚ್ -1ಬಿ ವೀಸಾ ಕಾನೂನಿನ ಬಗ್ಗೆ ಅಮೆರಿಕಾದಲ್ಲಿರುವ ಭಾರತೀಯ ಕಂಪೆನಿಗಳಲ್ಲಿ ಆತಂಕ, ಕಳವಳ ಸೃಷ್ಟಿಸಿದೆ. ಅಲ್ಲದೆ ಇತ್ತೀಚೆಗೆ ಜಾರಿಗೆ ಬಂದ ಲೊಫ್ಗ್ರೆನ್ ಮಸೂದೆ ಹೆಚ್ 1-ಬಿ ವೀಸಾ ಹೊಂದಿರುವವರ ಕನಿಷ್ಠ ವೇತನವನ್ನು 60,000 ಅಮೆರಿಕಾ ಡಾಲರ್ ನಿಂದ 1,30,000 ಡಾಲರ್ ಗೆ ಹೆಚ್ಚಿಸಬೇಕೆಂದು ಕಾನೂನು ಜಾರಿಗೆ ತಂದದ್ದು ಕೂಡ ಆತಂಕವನ್ನು ಸೃಷ್ಟಿಸಿದೆ. ಇದರಿಂದ ನಿರ್ವಹಣಾ ವೆಚ್ಚ ಹೆಚ್ಚಾಗುವುದಲ್ಲದೆ ತಮಗೆ ಬೇಕಾದಂತೆ ಕುಶಲ ಕೆಲಸಗಾರರು ಸಿಗುವುದಿಲ್ಲ ಎಂಬ ಕಳವಳ ಭಾರತೀಯ ಕಂಪೆನಿಗಳದ್ದು. ಪ್ರಸ್ತುತ ಅಮೆರಿಕಾದಲ್ಲಿ 110 ಶತಕೋಟಿ ಭಾರತೀಯ ಹೊರಗುತ್ತಿಗೆ ಕೈಗಾರಿಕೆಗಳನ್ನು ಒಳಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT