ದೇಶ

ಪಿಒಕೆಯಲ್ಲಿ ಬಾಡಿಗೆಗೆ ಭೂಮಿ: ಭಾರತೀಯ ಸೇನೆಗೆ 5 ಲಕ್ಷ ವಂಚನೆ!

Srinivas Rao BV
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭೂಮಿಯೊಂದರ ದಾಖಲೆಗಳನ್ನು ತಿರುಚಿ ಭಾರತೀಯ ಸೇನೆಗೆ 6 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 
ಸಿಬಿಐ ತನಿಖೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಸ್ಥಳೀಯ ಅಧಿಕಾರಿಗಳು, ಸೇನಾ ಅಧಿಕಾರಿ ಹಾಗೂ ಸ್ಥಳೀಯರು, ಸಂಚು ಮಾಡಿ ಸೇನೆಗೆ ವಂಚನೆ ಮಾಡಿದ್ದಾರೆ. ವಿಭಾಗೀಯ ರಕ್ಷಣಾ ಎಸ್ಟೇಟ್ ಅಧಿಕಾರಿ ಹಾಗೂ ಭೂಮಿಯ ಹಕ್ಕು ಪತ್ರಗಳನ್ನು ನಿರ್ವಹಣೆ ಮಾಡುವ ಅಧಿಕಾರಿ ಪಾಕಿಸ್ತಾನ ಕಾಶ್ಮೀರದಲ್ಲಿರುವ ಭೂಮಿಗೆ ಭಾರತೀಯ ಸೇನೆಯಿಂದ ಬಾಡಿಗೆ ಪಡೆಯುವ ಮೂಲಕ ವಂಚನೆಗೆ ಸಂಚು ರೂಪಿಸಿರುವುದು ಎಂದು ಸಿಬಿಐ ತನಿಖೆ ವೇಳೆ ಬೆಳಕಿಗೆ ಬಂದಿದೆ. 
ವಂಚನೆ ಪ್ರಕರಣದಲ್ಲಿ ಕಂದಾಯ ಇಲಾಖೆ ಅಧಿಕಾರಿ ಸೇನೆಯ ಅಧಿಕಾರಿಯೂ ಭಾಗಿಯಾಗಿದ್ದು, ಸುಳ್ಳು ದಾಖಲೆ ಸೃಷ್ಟಿಸುವ ಮೂಲಕ ವ್ಯಕ್ತಿಯೊಬ್ಬರಿಗೆ ಬಾಡಿಗೆ ಕೊಡಿಸಿದ್ದಾರೆ. 2000 ರ ಬೋರ್ಡ್ ಪ್ರಕ್ರಿಯೆಗಳಲ್ಲಿ ಭಾಗವಹಿಸಿದ್ದ ವಿಭಾಗೀಯ ರಕ್ಷಣಾ ಎಸ್ಟೇಟ್ ಅಧಿಕಾರಿ ಆರ್ ಎಸ್ ಚಂದ್ರವಂಶಿ ಹಾಗೂ ಪಟ್ವಾರಿ ದರ್ಶನ್ ಕುಮಾರ್ ಭೂಮಿ ರಕ್ಷಣಾ ಪಡೆಗಳ ಸ್ವಾಧೀನದಲ್ಲಿರುವುದನ್ನು ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭೂಮಿಯ ಮಾಲಿಕರೆನ್ನಲಾದ ರಾಜೇಶ್ ಕುಮಾರ್ ಹಾಗೂ ಖಂಬಾ ಗ್ರಾಮದ ಇತರರಿಗೆ 4.99 ಲಕ್ಷ ರೂಪಾಯಿಯನ್ನು ಬಾಡಿಗೆ ಪರಿಹಾರ ಧನವಾಗಿ ನೀಡಲಾಗಿದೆ. 
ಆದರೆ 1969-70 ರ ಜಮಾಬಂದಿ ನೋಂದಣಿ ಪ್ರಕಾರ,  3000, 3035, 3041 and 3045 ಖಾತಾ ಸಂಖ್ಯೆಯ ಭೂಮಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದೆ. ಆದರೆ ಇದಕ್ಕೆ ಭಾರತದ ರಕ್ಷಣಾ ಎಸ್ಟೇಟ್ ನಿಂದ ಬಾಡಿಗೆ ನೀಡಲಾಗುತ್ತಿದ್ದು, ಬಾಡಿಗೆಯ ಮೊತ್ತ ಖಾಸಗಿ ವ್ಯಕ್ತಿಗೆ ಸೇರಿದೆ ಎಂದು ಸಿಬಿಐ ವಿಚಾರಣೆ ವೇಳೆ ಬಹಿರಂಗವಾಗಿದೆ. 
SCROLL FOR NEXT