ಕೊನೆಗೂ ಭೂಕಂಪ ಸಂಭವಿಸಿತು!: ರಾಹುಲ್ ಗಾಂಧಿ ಹೇಳಿಕೆಗೆ ಮೋದಿ ವ್ಯಂಗ್ಯ
ನೋಟು ನಿಷೇಧದ ಕುರಿತು ನಾನು ಸಂಸತ್ತಿನಲ್ಲಿ ಮಾತನಾಡಿದರೆ ಭೂಕಂಪ ಆಗುತ್ತೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸಂಸತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.
ನವದೆಹಲಿ: ನೋಟು ನಿಷೇಧದ ಕುರಿತು ನಾನು ಸಂಸತ್ತಿನಲ್ಲಿ ಮಾತನಾಡಿದರೆ ಭೂಕಂಪ ಆಗುತ್ತೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸಂಸತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದು, ತಾಯ್ನೆಲವನ್ನು ಲೂಟಿ ಮಾಡಿದ್ದರಿಂದ ಭೂಮಿ ತಾಯಿ ಆಕ್ರೋಶಗೊಂಡಿದ್ದು ಕೊನೆಗೂ ಭೂಕಂಪ ಸಂಭವಿಸಿದೆ ಎಂದಿದ್ದಾರೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿ ಮಾತನಾಡಿದ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಪ್ರಧಾನಿ ರಾಹುಲ್ ಗಾಂಧಿ ಹೇಳಿಕೆಗಳ ಬಗ್ಗೆ ನೇರವಾಗಿ ಟೀಕಿಸಿದ್ದು, ಕೊನೆಗೂ ಭೂಕಂಪ ಸಂಭವಿಸಿದೆ. ರಾಜ್ಯ ಸರ್ಕಾರಗಳ ಕೇಂದ್ರ ಸರ್ಕಾರ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ.
ಹಗರಣ (ಸ್ಕ್ಯಾಮ್) ಗೆ ರಾಹುಲ್ ಗಾಂಧಿ ನೀಡಿರುವ ಹೊಸ ವ್ಯಾಖ್ಯಾನದ ಬಗ್ಗೆಯೂ ಮೋದಿ ವ್ಯಂಗ್ಯವಾಡಿದ್ದು, ಹಗರಣದ ಪದದಲ್ಲಿ ಯಾರಿಗಾದರೂ ಸೇವೆ ಅಥವಾ ಸಮಾಜೋದ್ಧಾರದಂತಹ ಸಕಾರಾತ್ಮಕ ಅರ್ಥ ಹುಡುಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ನೋಟು ನಿಷೇಧದ ಬಗ್ಗೆ ಡಿ.9 ರಂದು ಮಾತನಾಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಲೋಕಸಭೆಯಲ್ಲಿ ಚರ್ಚೆ ಆರಂಭಿಸದರೇ ಸರ್ಕಾರ ಹೆದರಿ ಪಲಾಯಮ ಮಾಡುತ್ತದೆ, ನಾನು ಮೋದಿ ಅವರ ಹಗರಣದ ಬಗ್ಗೆ ಮಾತನಾಡುತ್ತೇನೆ, ನಾನು ಸಂಸತ್ತಿನಲ್ಲಿ ಮಾತನಾಡುವಾಗ ಭೂಕಂಪ ಆಗುವುದು ಖಚಿತ ಎಂದು ಹೇಳಿದ್ದರು.
ಇದೇ ವೇಳೆ ಸ್ವಾತಂತ್ರ್ಯಕ್ಕಾಗಿ ಬಿಜೆಪಿಯಿಂದ ಯಾರೂ ಬಲಿದಾನ ಮಾಡಿಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮೋದಿ, ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಡಲು ಸಾಧ್ಯಗಾವದ ನನ್ನಂತಹ ಹಲವರು ಭಾರತಕ್ಕಾಗಿ, ಭಾರತದ ಸೇವೆಗಾಗಿ ಜೀವಿಸುತ್ತಿದ್ದೇವೆ. ಕಾಂಗ್ರೆಸ್ ನವರು ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಮಾಡಿದ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಮುಂತಾದವರ ಬಗ್ಗೆ ಮಾತನಾಡಿದ್ದು ನಾವು ಕೇಳಿಲ್ಲ. ಸ್ವಾತಂತ್ರ್ಯ ಹೋರಾಟ ಕೇವಲ ಒಂದು ಕುಟುಂಬದ ಪರಿಶ್ರಮ, ಸ್ವಾತಂತ್ರ್ಯಗಳಿಸಿದ್ದಕ್ಕಾಗಿ ದೇಶದ ಜನತೆ ಒಂದು ಕುಟುಂಬಕ್ಕೆ ಋಣಿಯಾಗಿರಬೇಕು ಎಂಬ ರೀತಿಯಲ್ಲಿ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.