ದೇಶ

ಶೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ: ಕಳ್ಳತನಕ್ಕೆ ಇಳಿದ ಸರ್ಕಾರಿ ಶಾಲೆ ಮುಖ್ಯೋಪಾಧ್ಯಾಯ

Vishwanath S
ಸಲೇಂ: ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ರಾತ್ರಿ ವೇಳೆ ಕಳ್ಳತನ ಮಾಡಿ ಸಿಕ್ಕಿಬಿದ್ದಿರುವ ಘಟನೆ ಸಲೇಂನಲ್ಲಿ ನಡೆದಿದೆ. 
ಇರೋಡ್ ಜಿಲ್ಲೆಯ ಕೊಲ್ಲಾನ್ಕಾಡದ 40 ವರ್ಷದ ಸಿ. ಚಂದ್ರನ್ ಅವರು ಅಂತಿಯೂರ್ ಬಳಿಯ ಸೆಮ್ಪುಲಿಚಪಾಳ್ಯಂ ಶಾಲೆಯ ಮುಖ್ಯೋಪಧ್ಯಾಯರಾಗಿದ್ದಾರೆ. ನಿನ್ನೆ ಸಂಜೆ ಇರೋಡ್ ಜಂಕ್ಷನ್ ಬಳಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಚಂದ್ರನ್ ಅವರು ಬಿಕ್ಕಿಬಿದ್ದಿದ್ದು ಅವರನ್ನ ಪರಿಶೀಲನೆ ನಡೆಸಿದ ವೇಳೆ ಅವರ ಬ್ಯಾಗ್ ನಲ್ಲಿ ಎರಡು ಸವರನ್ ಚಿನ್ನಾಭರಣ ಮತ್ತು ಕೆಲ ದಾಖಲೆ ಪುಸ್ತಕಗಳು ಸಿಕ್ಕಿವೆ. ಈ ಬಗ್ಗೆ ವಿಚಾರಿಸಿದಾಗ ಸೂಕ್ತ ಉತ್ತರ ನೀಡದ್ದರಿಂದ ಮುಖ್ಯೋಪಾಧ್ಯಾಯರ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ. 
ವಿಚಾರಣೆ ವೇಳೆ ಚಂದ್ರನ್ ಅವರು ಶೇರು ಮಾರುಕಟ್ಟೆಯಲ್ಲಿ ಭಾರೀ ಮೊತ್ತದ ಹಣವನ್ನು ವ್ಯಯಿಸಿದ್ದು ನಷ್ಟ ಉಂಟಾಗಿದ್ದರಿಂದ ಕಳ್ಳತನಕ್ಕೆ ಇಳಿದಿದ್ದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಜೆ ದಿನಗಳಲ್ಲಿ ಚಂದ್ರನ್ ಅವರು ಇರೋಡ್ ಜಂಕ್ಷನ್ ನ ರೈಲು ನಿಲ್ದಾಣಕ್ಕೆ ಬಂದು ರೈಲಿನಲ್ಲಿ ಮಲಗಿರುವವರ ಚಿನ್ನಾಭರಣಗಳನ್ನು ಕದಿಯುತ್ತಿದ್ದರು. 
SCROLL FOR NEXT