ನವದೆಹಲಿ: ಕಾಯ್ದೆಯಡಿ ಗಮನ ಹರಿಸಲಾಗುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.
ಸೇನಾ ಯೋಧರಿಗೆ ಏನೇ ತೊಂದರೆಗಳಿದ್ದರೆ ಸೇನೆಯ ಮುಖ್ಯಸ್ಥರು ಯಾಂತ್ರಿಕ ನಿವಾರಣಾ ಕೇಂದ್ರವನ್ನು ಸ್ಥಾಪಿಸಿದ್ದು ರಕ್ಷಣಾ ಸಚಿವರನ್ನು ಸಂಪರ್ಕಿಸಬಹುದು ಮತ್ತು ಅನೇಕ ಕಡೆ ಕುಂದುಕೊರತೆ ನಿವಾರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ನಿನ್ನೆ ಅವರು ರಾಜ್ಯಸಭೆಯಲ್ಲಿ ಉತ್ತರಿಸಿದರು.
ಸೇನಾಯೋಧರ ದೂರುಗಳು ಸರಿಯಾದ ಕಡೆಯಿಂದ ಬಂದರೆ ಮತ್ತು ಅದು ನಿಜಕ್ಕೂ ಸಮಸ್ಯೆಯಾಗಿದ್ದರೆ ಅದನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ನಿನ್ನೆ ಶೂನ್ಯವೇಳೆಯಲ್ಲಿ ವಿರೋಧ ಪಕ್ಷದ ನಾಯಕರು ಬಿಎಸ್ಎಫ್ ಯೋಧ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೇನೆಯಲ್ಲಿ ನೀಡುತ್ತಿರುವ ಆಹಾರ ಕಳಪೆಯಾಗಿರುತ್ತದೆ ಎಂದು ಆರೋಪಿಸಿ ದೂರು ನೀಡಿದ್ದನ್ನು ಪ್ರಸ್ತಾಪಿಸಿದರು.
ಅದಕ್ಕೆ ಉತ್ತರಿಸಿದ ಪರಿಕ್ಕರ್, ಸರ್ಕಾರ ಸೈನಿಕರಿಗೆ ನೀಡುವ ಆಹಾರದ ಪ್ರಮಾಣ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ. ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಕೆಲಸ ಮಾಡುವ ಸೈನಿಕರಿಗೆ ವಿಶೇಷ ಆಹಾರ ನೀಡಲಾಗುತ್ತದೆ. ನಿತ್ಯದ ಆಹಾರದ ಜೊತೆ ಮಾಂಸಾಹಾರಿ, ಪೌಷ್ಟಿಕ ಆಹಾರ ಕೂಡ ಸರಬರಾಜು ಮಾಡಲಾಗುತ್ತದೆ ಎಂದರು.
ಯುದ್ಧ ಮಾಡುವ ಸೈನಿಕರಿಗೆ ಬುಲ್ಲೆಟ್ ಪ್ರೂಫ್ ಜಾಕೆಟ್, ಹೆಲ್ಮೆಟ್, ರೈಫಲ್ ಮತ್ತು ಇತರ ಉಪಕರಣಗಳನ್ನು ನೀಡಲಾಗುತ್ತದೆ. 2017ರ ಅಂತ್ಯದೊಳಗೆ 1 ಲಕ್ಷಕ್ಕೂ ಅಧಿಕ ಬುಲ್ಲೆಟ್ ಪ್ರೂಫ್ ಜಾಕೆಟ್ ಗಳನ್ನು ಖರೀದಿಸಲಾಗುವುದು ಎಂದರು.
ನಿವಾರಣಾ ಯಾಂತ್ರಿಕ ತಮ್ಮ ಕುಂದು ಕೊರತೆಗಳನ್ನು, ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ಸಂದರ್ಭದಲ್ಲಿ, ಭಾರತೀಯ ಸೇನೆಯಲ್ಲಿ ಈಗಾಗಲೇ ಒಂದು ವ್ಯವಸ್ಥೆಯಿದ್ದು, ಸೇನಾಪಡೆ ಯೋಧರು ಅದರಲ್ಲಿ ಮಧ್ಯಪ್ರವೇಶಿಸುವುದು ಸಮಂಜಸವಲ್ಲ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos