ಸಾಂದರ್ಭಿಕ ಚಿತ್ರ 
ದೇಶ

ಮಣಪ್ಪುರಂ ಫೈನಾನ್ಸ್ ನಲ್ಲಿ ದರೋಡೆ: 5 ಲಕ್ಷ ರೂ. ನಗದು, 30 ಕೆಜಿ ಚಿನ್ನ ಲೂಟಿ

ಮಣಪ್ಪುರಂ ಫೈನಾನ್ಸ್ ಕಚೇರಿಗೆ ನುಗ್ಗಿದ 7 ಮಂದಿ ಶಸ್ತ್ರದಾರಿಗಳು 5 ಲಕ್ಷ ನಗದು ಸೇರಿ ಕೋಟ್ಯಾಂತರ ರು ಮೌಲ್ಯದ ಚಿನ್ನ ದೋಚಿ ಪರಾರಿಯಾಗಿರುವ ಘಟನೆ...

ಗುರಗಾವ್: ಮಣಪ್ಪುರಂ ಫೈನಾನ್ಸ್ ಕಚೇರಿಗೆ ನುಗ್ಗಿದ 7 ಮಂದಿ ಶಸ್ತ್ರದಾರಿಗಳು 5 ಲಕ್ಷ ನಗದು ಸೇರಿ ಕೋಟ್ಯಾಂತರ ರು ಮೌಲ್ಯದ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ಗುರಗಾವ್ ನಲ್ಲಿ ನಡೆದಿದೆ.

ಸೆಕ್ಯೂರಿಟಿ ಗಾರ್ಡ್  ಹಾಗೂ ಗ್ರಾಹಕರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಮತ್ತು ಹಣ ದೋಚಿದ್ದಾರೆ. ಗ್ರಾಹಕರ ಸೋಗಿನಲ್ಲಿ ಕಚೇರಿ ಒಳಗೆ ಬಂದ ದರೋಡೆಕೋರರು ಮಹಿಳೆ ಸೇರಿದಂತೆ ನಾಲ್ಕು ಉದ್ಯೋಗಿಗಳನ್ನು ಒತ್ತೆಯಾಗಿರಿಸಿಕೊಂಡಿದ್ದರು. ಮಾಸ್ಕ್ ಹಾಕಿಕೊಂಡಿದ್ದ ಮುಸುಕುಧಾರಿಗಳು ಗುರುತು ಪತ್ತೆಯಾಗದಿರಲೆಂದು ಸಿಸಿಟಿವಿ ಕ್ಯಾಮೆರಾಗೆ ಬಣ್ಣ ಹಚ್ಚಿದ್ದಾರೆ.

ಸ್ಥಳಕ್ಕೆ ಗುರಗಾವ್ ಪೊಲೀಸ್ ಕಮಿಷನರ್ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಎಷ್ಟು ಪ್ರಮಾಣದ ಚಿನ್ನ ಲೂಟಿಯಾಗಿದೆ ಎಂಬುದು ಲೆಕ್ಕಕ್ಕೆ ಸಿಗುತ್ತಿಲ್ಲ . ಸರಿಸುಮಾರು 30 ಕೆಜಿ ಚಿನ್ನ ಲೂಟಿಯಾಗಿದೆ  ಎಂದು ಹೇಳಲಾಗುತ್ತಿದೆ.  ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಕಳೆದ 6 ತಿಂಗಳಲ್ಲಿ ಮಣಪ್ಪುರಂ ಫೈನಾನ್ಸ್ ಕಚೇರಿಯಲ್ಲಿ  ನಡೆದ 6ನೇ ದರೋಡೆ ಇದಾಗಿದೆ. ಮುಂಬೈ ಮತ್ತು ದೆಹಲಿ ಸುತ್ತಮುತ್ತ ಮಣಪ್ಪುರಂ ಕಚೇರಿಗಳನ್ನೇ ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT