ತ್ರಿಶೂರ್(ಕೇರಳ):ಭಾರತೀಯ ಜನತಾ ಪಕ್ಷದ ಯುವ ಕಾರ್ಯಕರ್ತನೊಬ್ಬನನ್ನು ಕಳೆದ ರಾತ್ರಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿರುವ ಘಟನೆ ತ್ರಿಶೂರಿನ ಮುಕ್ಕಟ್ಟುಕಾರ ಪ್ರದೇಶದಲ್ಲಿ ನಡೆದಿದೆ.
ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ 20 ವರ್ಷದ ಕಾರ್ಯಕರ್ತ ನಿರ್ಮಲ್ ನನ್ನು ಚಾಕುವಿನಿಂದ ತಿವಿದು ಸಾಯಿಸಲಾಗಿದೆ.
ಕೃತ್ಯದ ಹಿಂದೆ ಭಾರತೀಯ ಕಮ್ಯೂನಿಸ್ಟ್ ಪಕ್ಷದವರ ಕೈವಾಡವಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯ ಘಟಕ ಜಿಲ್ಲೆಯಲ್ಲಿ ಇಂದು ಮುಷ್ಕರಕ್ಕೆ ಕರೆ ನೀಡಿದೆ.
ಬಿಜೆಪಿ-ಆರ್ಎಸ್ಎಸ್ ಮೈತ್ರಿ ಮತ್ತು ಸಿಪಿಎಂ ಕಾರ್ಯಕರ್ತರ ಮಧ್ಯೆ ಕಳೆದ ಕೆಲ ತಿಂಗಳುಗಳಿಂದ ಘರ್ಷಣೆ ನಡೆಯುತ್ತಿತ್ತು. ಕಳೆದ ತಿಂಗಳು 52 ವರ್ಷದ ಬಿಜೆಪಿ ಕಾರ್ಯಕರ್ತ ಮುಲ್ಲಪ್ರಮ್ ಎಝ್ಹುತಾನ್ ಸಂತೋಷ್ ಅವರು ಮನೆಯಲ್ಲಿ ಒಬ್ಬರೇ ಇದ್ದಾಗ ಅವರ ಕೊಲೆಯಾಗಿತ್ತು. ಆ ಘಟನೆ ಹಿಂದೆ ಕೂಡ ಸಿಪಿಎಂ ಕಾರ್ಯಕರ್ತರ ಕೈವಾಡವಿತ್ತು ಎಂದು ಬಿಜೆಪಿ ಆರೋಪಿಸಿತ್ತು.