ದೇಶ

ಸೇನೆ, ಸೇನಾ ಮುಖ್ಯಸ್ಥರನ್ನು ರಾಜಕೀಯದಿಂದ ದೂರವಿಡಿ: ಕಾಂಗ್ರೆಸ್'ಗೆ ಕೇಂದ್ರ ಮನವಿ

Manjula VN

ನವದೆಹಲಿ: ರಾಜಕೀಯ ವಿಚಾರಗಳಲ್ಲಿ ಭಾರತೀಯ ಸೇನೆಯನ್ನು ಹಾಗೂ ಸೇನಾ ಮುಖ್ಯಸ್ಥರನ್ನು ಮಧ್ಯೆ ತರಬೇಡಿ, ರಾಜಕೀಯ ವಿಷಯಗಳಿಂದ ಸೇನೆಯನ್ನು ದೂರವಿಡಿ ಎಂದು ಕಾಂಗ್ರೆಸ್'ಗೆ ಕೇಂದ್ರ ಸರ್ಕಾರ ಶುಕ್ರವಾರ ಮನವಿ ಮಾಡಿಕೊಂಡಿದೆ.

ಈ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು, ರಾಜಕೀಯ ವಿಚಾರಗಳಿಂದ ಸೇನೆಯನ್ನು ಹಾಗೂ ಸೇನಾ ಮುಖ್ಯಸ್ಥರನ್ನು ದೂರವಿಡುವಂತೆ ಕಾಂಗ್ರೆಸ್ ಬಳಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ. ಗಡಿಯಲ್ಲಿ ಪಾಕಿಸ್ತಾನದ ಉಗ್ರರು ಗಡಿಯಲ್ಲಿ ದಾಳಿ ಮಾಡುತ್ತಿದ್ದು, ನಮ್ಮ ಯೋಧರು ದೇಶಕ್ಕಾಗಿ ಹುತಾತ್ಮರಾಗುತ್ತಿದ್ದಾರೆ. ದೇಶಕ್ಕಿಂದ ಅಧಿಕಾರ ದೊಡ್ಡದಲ್ಲ ಎಂಬುದನ್ನು ಕಾಂಗ್ರೆಸ್ ಮನವರಿಕೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.

ಈ ಹಿಂದಷ್ಟೇ ಹೇಳಿಕೆ ನೀಡಿದ್ದ ಕಾಂಗ್ರೆಸ್ ಪಕ್ಷ ಮುಖ್ಯ ವಕ್ತಾರ ರವೀಂದರ್ ಶರ್ಮಾ ಅವರು, ಕಾಶ್ಮೀರ ವಿಚಾರ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಸಮಸ್ಯೆಯನ್ನು ಸರ್ಕಾರ ಸೂಕ್ತ ರೀತಿಯಲ್ಲಿ ಹಾಗೂ ಉತ್ತಮ ರೀತಿಯಲ್ಲಿ ನಿಭಾಯಿಸಬೇಕಿದೆ. ಕಾಶ್ಮೀರದಲ್ಲಿರುವ ನಾಗರೀಕರ ಸುರಕ್ಷತೆಗೆ ಭದ್ರತಾ ಪಡೆಗಳಿದ್ದು, ಸೇನಾಪಡೆ ನಡೆಸುವ ಕಾರ್ಯಾಚರಣೆಯಲ್ಲಿ ಯಾವುದೇ ಕಾರಣಕ್ಕೂ ಕಾಶ್ಮೀರ ಯುವಕರು ಅಡ್ಡಿಯುಂಟು ಮಾಡಬಾರದು ಎಂದು ಹೇಳಿದ್ದರು.

ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಸರ್ಕಾರವನ್ನು ಟೀಕೆ ಮಾಡಿದ್ದರು. ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫವಾಗಿದೆ. ಕಾಶ್ಮೀರದಲ್ಲಿ ಇಂದು ಈ ರೀತಿಯ ಪರಿಸ್ಥಿತಿ ಎದುರಾಗಲು ಸರ್ಕಾರವನ್ನು ದೂಷಿಸಬೇಕು. ನಾವು ಸರ್ಕಾರ ನಡೆಸುತ್ತಿದ್ದಾಗ ಕಾಶ್ಮೀರದಲ್ಲಿ ಈ ರೀತಿಯ ಕೆಟ್ಟ ಪರಿಸ್ಥಿತಿ ಏಕೆ ಇರಲಿಲ್ಲ? ಕಾಶ್ಮೀರ ಯುವಕರಿಗೆ ಈ ರೀತಿಯಾಗಿ ಬೆದರಿಕೆ ಹಾಕುವುದು ಸರಿಯಲ್ಲ. 1000 ಮಕ್ಕಳು ಇಂದು ಕಾಶ್ಮೀರದಲ್ಲಿ ಪರಿಣಾಮ ಎದುರಿಸುತ್ತಿದ್ದಾರೆ. 1200 ಮಕ್ಕಳು ಕಣ್ಣುಗಳನ್ನು ಕಳೆದುಕೊಂಡಿದ್ದಾರೆಂದು ಹೇಳಿದ್ದರು.

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಕ್ತಾರ ಜುನೈದ್ ಅಜಿ ಮಟ್ಟು ಅವರು ಮಾತನಾಡಿ ರಾವತ್ ಅವರ ಹೇಳಿಕೆ ನಿಜಕ್ಕೂ ದುರಾದೃಷ್ಟಕರ ಸಂಗತಿ. ಈ ರೀತಿಯ ನಿರ್ಧಾರಗಳು ಕಾಶ್ಮೀರ ಯುವಕರು ಮತ್ತಷ್ಟು ದೂರಾಗುವಂತೆ ಮಾಡುತ್ತದೆ. ಅಲ್ಲದೆ, ಅವರಲ್ಲಿರುವ ಹಗೆತನ ಮತ್ತಷ್ಟು ಹೆಚ್ಚಾಗುತ್ತೆ ಎಂದು ತಿಳಿಸಿದ್ದರು.

SCROLL FOR NEXT