ದೇಶ

ಕರ್ದಾಶಿಯಾನ್-ಸನ್ನಿ ಲಿಯೋನ್ ಹಿಂದಿಕ್ಕಿದ ಇಸ್ರೋ ಸೆಲ್ಫಿ ವಿಡಿಯೋ

Vishwanath S
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು, ಬಹು ನಿರೀಕ್ಷಿತ ಮತ್ತು ವಿಶ್ವದಾಖಲೆಯ ಏಕಕಾಲಕ್ಕೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮಧ್ಯೆ ಇಸ್ರೋ ಉಡಾವಣೆಯ ಸೆಲ್ಫಿ ವಿಡಿಯೋವನ್ನು ಬಿಡುಗಡೆ ಮಾಡಿದ್ದು ಈ ಸೆಲ್ಫಿ ವಿಡಿಯೋ ಕಿಮ್ ಕದ್ರಾಶಿಯಾನ್ ಮತ್ತು ಸನ್ನಿ ಲಿಯೋನ್ ಅವರ ಸೆಲ್ಫಿಗಳನ್ನು ಹಿಂದಕ್ಕಿಟ್ಟಿದೆ. 
ವಿಶ್ವದ ಸೆಲ್ಫಿ ಕ್ವೀನ್ ಗಳೆಂದು ಕರೆಸಿಕೊಳ್ಳುವ ಕಿಮ್ ಕರ್ದಾಶಿಯಾನ್ ಮತ್ತು ಸನ್ನಿ ಲಿಯೋನ್ ತಮ್ಮ ಹಾಟ್ ಫೋಟೋಗಳಿಂದ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ಭಾರೀ ಪ್ರಚಾರ ಪಡೆದುಕೊಳ್ಳುತ್ತಾರೆ. ಅದೇ ರೀತಿ ಇಸ್ರೋ ಸಹ ಉಡಾವಣೆಯ ಸೆಲ್ಫಿ ವಿಡಿಯೋವನ್ನು ಬಿಡುಗಡೆ ಮಾಡಿದ್ದು ಲಕ್ಷಾಂತರ ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ. 
ಇಸ್ರೋದ ಯಶಸ್ವೀ ಉಡಾವಣಾ ವಾಹಕಗಳಲ್ಲಿ ಒಂದಾದ ಪಿಎಸ್‌ಎಲ್‌ವಿ ಸಿ 37 ವಾಹಕದ ಮೂಲಕ ಕಾರ್ಟೋಸ್ಯಾಟ್-2 ಸೇರಿದಂತೆ ಇತರೆ 103 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ ಸುಮಾರು 9.28ರ ವೇಳೆಗೆ ಉಡಾವಣೆ ಮಾಡಲಾಯಿತು. ಕಾರ್ಟೋಸ್ಯಾಟ್ -2 ಭೂವೀಕ್ಷಣಾ ಕಾರ್ಯ ನಡೆಸುವ ಉಪಗ್ರಹವಾಗಿದ್ದು, ಇದರೊಂದಿಗೆ ಅಮೆರಿಕ, ಜರ್ಮನಿ, ಇಸ್ರೋಲ್‌, ಯುಎಇ, ನೆದರ್‌ಲ್ಯಾಂಡ್, ಬೆಲ್ಜಿಯಂ ಸೇರಿದಂತೆ ವಿದೇಶದ 101 ವಾಣಿಜ್ಯ ಉದ್ದೇಶಿತ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು. 
SCROLL FOR NEXT