ಬೀಜಿಂಗ್: ಮಸೂದ್ ಅಜರ್ ಗೆ ವಿಶ್ವಸಂಸ್ಥೆ ಮೂಲಕ ನಿಷೇಧ ವಿಧಿಸುವ ವಿಚಾರದ ಬಗ್ಗೆ ಭಾರತದೊಂದಿಗೆ ಚರ್ಚೆ ನಡೆಸುವುದಕ್ಕೂ ಮುನ್ನ ಚೀನಾ ಪ್ರತಿಕ್ರಿಯೆ ನೀಡಿದ್ದು, ಭಾರತದ ಪ್ರಸ್ತಾವನೆಯನ್ನು ಬೆಂಬಲಿಸಲು ಮತ್ತಷ್ಟು ಸ್ಪಷ್ಟ ಸಾಕ್ಷಾಧಾರಗಳು ಅಗತ್ಯವಿದೆ ಎಂದು ಹೇಳಿದೆ.
ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಹಾಗೂ ಚೀನಾದ ವಿದೇಶಾಂಗ ಕಾರ್ಯದರ್ಶಿಗಳು ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಕುರಿತಾಗಿ ಫೆ.22 ರಂದು ಮಾತುಕತೆ ನಡೆಯಲಿದೆ. ಆದರೆ ಇದಕ್ಕೂ ಮುನ್ನ ಚೀನಾ ಹೇಳಿಕೆ ನೀಡಿದ್ದು, ಭಾರತದ ಪ್ರಸ್ತಾವನೆಯನ್ನು ಬೆಂಬಲಿಸಬೇಕಾದರೆ ಮತ್ತಷ್ಟು ಸ್ಪಷ್ಟ ಸಾಕ್ಷಿ ಬೇಕು ಎಂದು ಹೇಳಿದ್ದಾರೆ.
ಮಾತುಕತೆ ವೇಳೆಯಲ್ಲಿ ಅನೇಕ ಜಾಗತಿಕ ಬೆಳವಣಿಗೆಗಳ ಬಗ್ಗೆ ಉಭಯ ಕಾರ್ಯದರ್ಶಿಗಳೂ ಚರ್ಚೆ ನಡೆಸಲಿದ್ದಾರೆ. ಪಾಕಿಸ್ತಾನದ ಉಗ್ರ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಭಾರತದ ಪ್ರಸ್ತಾವನೆಗೆ ಚೀನಾ ಹಲವು ಬಾರಿ ತಡೆಯೊಡ್ಡಿದ್ದು, ಇತ್ತೀಚೆಗಷ್ಟೇ ಅಮೆರಿಕಾದ ಪ್ರಸ್ತಾವನೆಗೂ ಸಹ ಅಡ್ಡಗಾಲು ಹಾಕಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics