ದೇಶ

ವಿಧಾನಸಭಾ ಚುನಾವಣೆ 2017: ಉತ್ತರಪ್ರದೇಶದಲ್ಲಿ 3ನೇ ಹಂತದ ಮತದಾನ ಆರಂಭ

Manjula VN

ಲಖನೌ: ಉತ್ತರಪ್ರದೇಶ ವಿಧಾನಸಭಾ ಚುನಾವಣೆ 7 ಹಂತದ ಪೈಕಿ 3ನೇ ಹಂತದ ಮತದಾನ ಭಾನುವಾರ ಆರಂಭಗೊಂಡಿದೆ.

ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್'ರ ಲಖನೌ, ಸಮಾಜವಾದಿ ಪಕ್ಷದ ನಾಯಕರ ಪ್ರಬಲ ಹಿಡಿತವಿರುವ ಕನೌಜ್, ಮೈನ್ ಪುರಿ ಮತ್ತು ಇಟಾವಾ ಜಿಲ್ಲಾ ಕ್ಷೇತ್ರಗಳು ಸೇರಿದಂತೆ ಒಟ್ಟು 69 ಸ್ಥಾನಗಳಿಗೆ ಮತದಾನ ನಡೆಯಲಿದೆ. ಸುಮಾರು 2.4 ಕೋಟಿ ಮತದಾರರು ಮತದಾನಕ್ಕೆ ಅರ್ಹರಾಗಿದ್ದು, 826 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಒಟ್ಟಾರೆಯಾಗಿ 12 ಜಿಲ್ಲೆಗಳಲ್ಲಿ ಮತತನಾ ನಡೆಯಲಿದ್ದು, ಫರೂಖಾಬಾದ್, ಹರ್ದೋಯಿ, ಔರೈಯಾ, ಕಾನ್ಪುರ, ದೇಹಾತ್, ಉನ್ನಾವ್, ಬಾರಾಬಂಕಿ ಮತ್ತು ಸೀತಾಪುರ ಜಿಲ್ಲೆಗಳು ಇವುಗಳಲ್ಲಿ ಸೇರಿವೆ. 2012ರ ಚುನಾವಣೆಯಲ್ಲಿ ಈ 69 ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ 55, ಬಹುಜನ ಸಮಾಜ ಪಕ್ಷ 6. ಬಿಜೆಪಿ, 5 ಮತ್ತು ಕಾಂಗ್ರೆಸ್ 2 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದವು.

ಸಮಾಜವಾದಿ ನಾಯಕ ನರೇಶ್ ಅಗರ್ವಾರ್ ರ ಪುತ್ರ ನಿತಿನ್ ಅಗರ್ವಾಲ್, ಸಮಾಜವಾದಿ ಪಕ್ಷದ ಮುಖಂಡ ಶಿವಪಾಲ್, ಬಿಜೆಪಿಯ ಬೃಜೇಶ್ ಪಾಠಕ್, ರೀಟಾ ಬಹುಗುಣ ಜೋಷಿ ಹಾಗೂ ಮುಂತಾದವರು ಕಣದಲ್ಲಿರುವ ಪ್ರಮುಖರಾಗಿದ್ದಾರೆ.

SCROLL FOR NEXT