ದೇಶ

ಮುಂದಿನ ದಿನಗಳಲ್ಲಿ 2000 ರೂ ನೋಟನ್ನು ಹಿಂಪಡೆಯಬೇಕು: ಬಾಬಾ ರಾಮ್ ದೇವ್

Srinivas Rao BV
ಭೋಪಾಲ್: 2000 ರೂ ಮುಖಬೆಲೆಯ ನೋಟುಗಳನ್ನು ಪರಿಚಯಿಸಿರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಯೋಗ ಗುರು ಬಾಬಾ ರಾಮ್ ದೇವ್ ಅಭಿಪ್ರಾಯಪಟ್ಟಿದ್ದಾರೆ. 
ಭೋಪಾಲ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾದಿರುವ ಬಾಬಾ ರಾಮ್ ದೇವ್ ಗರಿಷ್ಠ ಮುಖಬೆಲೆಯ ನೋಟುಗಳಿದ್ದರೆ ಭ್ರಷ್ಟಾಚಾರ, ಆರ್ಥಿಕತೆಯ ಅಪರಾಧ, ರಾಜಕೀಯ ಅಪರಾಧ, ಮತದಾರರನ್ನು ಖರೀದಿಸುವ ಅಪಾಯ ಮತ್ತಷ್ಟು ಹೆಚ್ಚುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ 2000 ರೂ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದರ ಬಗ್ಗೆ ಚಿಂತಿಸುವುದು ಒಳಿತು ಎಂಬ ಸಲಹೆ ನೀಡಿದ್ದಾರೆ. 
"2000 ರೂ ಮುಖಬೆಲೆಯ ನೋಟುಗಳನ್ನು ಪರಿಚಯಿಸಿರುವುದು ನನಗೆ ಸೂಕ್ತ ಎನಿಸುತ್ತಿಲ್ಲ, ಗರಿಷ್ಠ ಮುಖಬೆಲೆಯ ನೋಟುಗಳು ಹೆಚ್ಚಿದ್ದಷ್ಟೂ ಹೆಚ್ಚು ಹಣವನ್ನು ಸೂಟ್ ಕೇಸ್ ನಂತಹ ಸಣ್ಣ ಜಾಗದಲ್ಲೇ ತುಂಬಿಕೊಳ್ಳಬಹುದಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ 2,000 ರೂ ನೋಟುಗಳನ್ನು ಹಿಂಪಡೆಯಬೇಕು ಎಂದು ಬಾಬಾ ರಾಮ್ ದೇವ್ ಅಭಿಪ್ರಾಯಪಟ್ಟಿದ್ದಾರೆ. 
ಇನ್ನು ನರ್ಮದಾ ನದಿಯ ತೀರದಲ್ಲಿ ಮದ್ಯದ ಅಂಗಡಿಗಳನ್ನು ಮುಚ್ಚಿಸಲು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೈಗೊಂಡಿರುವ ನಿರ್ಧಾರವನ್ನು ಬಾಬಾ ರಾಮ್ ದೇವ್ ಶ್ಲಾಘಿಸಿದ್ದು, ದೇಶದಲ್ಲಿ ಮದ್ಯಪಾನ ಸಂಪೂರ್ಣ ನಿಷೇಧವಾಗಬೇಕು, ಇದೇ ಮಹಾತ್ಮಾ ಗಾಂಧಿ ಅವರ ಕನಸೂ ಆಗಿತ್ತು ಎಂದು ಕರೆ ನೀಡಿದ್ದಾರೆ.
SCROLL FOR NEXT