ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ 
ದೇಶ

ಬಿಎಂಸಿ ಮೇಯರ್ ಶಿವಸೇನೆಯವರೇ ಆಗಿರಲಿದ್ದಾರೆ: ಶಿವಸೇನೆ

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 82 ಸ್ಥಾನಗಳನ್ನು ಪಡೆದಿರುವ ಶಿವಸೇನೆ ಬಿಎಂಸಿ ಮೇಯರ್ ತಮ್ಮ ಪಕ್ಷದಿಂದಲೇ ಆಯ್ಕೆಯಾಗಲಿದ್ದಾರೆ ಎಂದು ಹೇಳಿದೆ.

ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 82 ಸ್ಥಾನಗಳನ್ನು ಪಡೆದಿರುವ ಶಿವಸೇನೆ ಬಿಎಂಸಿ ಮೇಯರ್ ತಮ್ಮ ಪಕ್ಷದಿಂದಲೇ ಆಯ್ಕೆಯಾಗಲಿದ್ದಾರೆ ಎಂದು ಹೇಳಿದೆ. 
ಚುನಾವಣೆಯ ಫಲಿತಾಂಶ ಹೊರಬಂದ ನಂತರ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಸಂಪಾದಕೀಯ ಬರೆದಿರುವ ಶಿವಸೇನೆ, ಬಿಜೆಪಿ ವಿರುದ್ಧ ಕಿಡಿ ಕಾರಿದ್ದು, ತನ್ನನ್ನು ಅಸ್ಥಿರಗೊಳಿಸಲು ಸಂಚು ರೂಪಿಸಿದೆ ಎಂದು ಆರೋಪಿಸಿದೆ. ಈ ಮೂಲಕ ಶಿವಸೇನೆ ಬಿಜೆಪಿಯೊಂದಿಗಿನ ಚುನಾವಣೋತ್ತರ ಮೈತ್ರಿಯನ್ನು ನಿರಾಕರಿಸಿರುವ ಸೂಚನೆ ನೀಡಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಶಿವಸೇನೆ ಮುಂಬೈ ಮಹಾನಗರ ಪಾಲಿಕೆಯನ್ನು 25 ವರ್ಷಗಳಿಂದ ಆಳುತ್ತಿದೆ. ನಮ್ಮ ಆಡಳಿತವನ್ನು ಅಸ್ಥಿರಗೊಳಿಸಲು ಬಿಜೆಪಿ ಸಂಚು ರೂಪಿಸಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಈ ರೀತಿಯಾಗಿರಲಿಲ್ಲ ಎಂದು ಶಿವಸೇನೆ ಕಿಡಿ ಕಾರಿದೆ. ಬಿಎಂಸಿ ಚುನಾವಣೆಗಾಗಿ ಬಿಜೆಪಿ ತನ್ನಲ್ಲಿದ್ದ ಎಲ್ಲವನ್ನೂ ಬಳಕೆ ಮಾಡಿದೆ. ಆದರೂ ಪಡೆಯಲು ಸಾಧ್ಯವಾಗಿದ್ದು ಕೇವಲ 82 ಸ್ಥಾನಗಳನ್ನು ಮಾತ್ರ. ಮೇಯರ್ ಸಹ ಶಿವಸೇನೆಯಿಂದಲೇ ಆಯ್ಕೆಯಾಗಲಿದ್ದಾರೆ ಎಂದು ಶಿವಸೇನೆ ಸ್ಪಷ್ಟಪಡಿಸಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 ವಿಶ್ವಕಪ್ 2026: ವಿಂಡೀಸ್ ವಿರುದ್ಧ 196 ರನ್ ದಾಖಲೆಯ ರನ್ ಚೇಸ್; ಸೆಮಿಫೈನಲ್‌ಗೆ ಭಾರತ ಎಂಟ್ರಿ!

ಒಂದೇ ದಾಳಿಯಲ್ಲಿ ಖಮೇನಿ ಸೇರಿ 48 ಇರಾನಿನ ನಾಯಕರ ಹತ್ಯೆ: ಟ್ರಂಪ್ ಘೋಷಣೆ

ಕನ್ನಡಿಗರ ರಕ್ಷಣೆ ನಮ್ಮ ಆದ್ಯತೆ: ಸಹಾಯವಾಣಿ ಪ್ರಾರಂಭಿಸಿದ ರಾಜ್ಯ ಸರ್ಕಾರ! ಮಾಹಿತಿ ಇಲ್ಲಿದೆ...

ನಮ್ಮ ಪ್ರತೀಕಾರ ಭೀಕರವಾಗಿರುತ್ತೇ: ಖಮೇನಿ ಸಾವಿನ ಬೆನ್ನಲ್ಲೇ ಜಮ್ಕರನ್ ಮಸೀದಿ ಮೇಲೆ ಕೆಂಪು ಧ್ವಜ ಹಾರಾಟ, ಇಸ್ರೇಲ್ ಕಟ್ಟಡಗಳು ಧ್ವಂಸ!

ಸೆಮಿಸ್ ನಿರ್ಣಾಯಕ ಪಂದ್ಯದಲ್ಲಿ ಭಾರತ ಕಳಪೆ ಫೀಲ್ಡಿಂಗ್; 195 ರನ್ ಬಾರಿಸಿದ ವೆಸ್ಟ್ ಇಂಡೀಸ್!

SCROLL FOR NEXT