ದೇಶ

ಮಹಾಶಿವರಾತ್ರಿ: ಕೊಯಂಬತ್ತೂರಿನಲ್ಲಿ 112 ಅಡಿ ಎತ್ತರದ ಶಿವನ ವಿಗ್ರಹ ಉದ್ಘಾಟಿಸಲಿರುವ ಪ್ರಧಾನಿ

Srinivas Rao BV
ಕೊಯಂಬತ್ತೂರು: ಫೆ.24 ರಂದು ದೇಶಾದ್ಯಂತ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತಿದ್ದು, ಕೊಯಂಬತ್ತೂರಿನಲ್ಲಿ ಈಶ ಫೌಂಡೇಷನ್ ನಿರ್ಮಿಸಿರುವ 112 ಅಡಿ ಎತ್ತರದ ಶಿವನ ವಿಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. 
ಸದ್ಗುರು ಜಗ್ಗಿ ವಾಸುದೇವ್ ಅವರ ಈಶ ಫೌಂಡೇಷನ್ ನಿರ್ಮಿತ ವಿಗ್ರಹ ಉದ್ಘಾಟನಾ ಕಾರ್ಯಕ್ರಮ ಸಂಜೆ.6 ಗಂಟೆಗೆ ನಡೆಯಲಿದೆ. ವಿಗ್ರಹ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ವಿಶ್ವಾದ್ಯಂತ ನಡೆಯಲಿರುವ ’ಮಹಾ ಯೋಗ ಯಜ್ಞಕ್ಕೆ ಅಗ್ನಿಯನ್ನು ಪ್ರತಿಷ್ಠಾಪಿಸಲಿದ್ದಾರೆ. ಮುಂದಿನ ವರ್ಷದ ವೇಳೆಗೆ 100 ಜನರಿಗೆ ಸರಳ ಯೋಗವನ್ನು ಕಲಿಸಿಕೊಡುವುದಾಗಿ  ಕನಿಷ್ಠ 1 ಮಿಲಿಯನ್ ಜನರು ಪ್ರತಿಜ್ಞೆ ಕೈಗೊಳ್ಳುವುದು ಮಹಾ ಯೋಗ ಯಜ್ಞದ ಮುಖ್ಯ ಉದ್ದೇಶವಾಗಿದೆ. 
ಸಂಜೆ 5:30 ರ ವೆಳೆಗೆ ಸುಲೂರ್ ಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದ ಹೆಲಿಕಾಫ್ಟರ್ ನಲ್ಲಿ ಈಶ ಫೌಂಡೇಷನ್ ಗೆ ತೆರಳಲಿದ್ದಾರೆ. 
SCROLL FOR NEXT