ದೇಶ

2007ರ ಅಜ್ಮೀರ್ ಸ್ಫೋಟ: ಮಾರ್ಚ್ 8ಕ್ಕೆ ವಿಚಾರಣೆ ಮುಂದೂಡಿಕೆ

Sumana Upadhyaya
ನವದೆಹಲಿ:2007ರ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳ ಕೋರ್ಟ್ ಮಾರ್ಚ್ 8ಕ್ಕೆ ಮುಂದೂಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲ ಕೆ.ಸಿ.ರಾಣಾ, ಆರೋಪಿಗಳ ಮತ್ತು ಸಾಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಕೇಸಿನ ಪ್ರಮಾಣ ದೊಡ್ಡದಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂಬಂಧಪಟ್ಟ ಕೇಸಿನಲ್ಲಿ 149 ಸಾಕ್ಷಿಗಳು ಮತ್ತು 451 ದಾಖಲೆಗಳಿವೆ. ಇವುಗಳನ್ನು ಪರೀಕ್ಷಿಸಿ ವಿಶ್ಲೇಷಣೆ ಮಾಡಿ ತೀರ್ಪು ನೀಡಬೇಕಾಗಿರುವುದರಿಂದ ಸ್ವಾಭಾವಿಕವಾಗಿ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ನ್ಯಾಯಾಲಯ ಮಾರ್ಚ್ 8ರಂದು ತೀರ್ಪು ನೀಡುವ ಸಾಧ್ಯತೆಯಿದೆ ಎಂದರು.
2007, ನವೆಂಬರ್ 10ರಂದು ಅಜ್ಮೀರ್ ನಲ್ಲಿ ಬಾಂಬ್ ಸ್ಫೋಟಗೊಂಡು ಮೂವರು ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದರು. ಆ ಕೇಸಿನ ವಿಚಾರಣೆಯನ್ನು 2011ರಲ್ಲಿ ರಾಷ್ಟ್ರೀಯ ತನಿಖಾ ತಂಡಕ್ಕೆ ವರ್ಗಾಯಿಸಲಾಗಿತ್ತು.
SCROLL FOR NEXT