ನವದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್ ಟುಡರ್ ಸದ್ಯದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಕೆನಡಾದ ಭಾರತೀಯ ರಾಯಭಾರಿ ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಸದ್ಯದಲ್ಲೇ ಕೆನಡಾದ ಪ್ರಧಾನಿ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ವಿದೇಶಾಂಗ ಇಲಾಖೆಯ ಮಾಜಿ ವಕ್ತಾರ, ಕೆನಡಾದ ನೂತನ ಭಾರತೀಯ ರಾಯಭಾರಿ ವಿಕಾಸ್ ಸ್ವರೂಪ್ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
2015 ರ ಏಪ್ರಿಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆನಡಾಗೆ ಭೇಟಿ ನೀಡಿದ್ದರು. ಈ ಭೇಟಿಯಲ್ಲಿ ಭಾರತ ಬಹುಕೋಟಿ ಡಾಲರ್ ಮೊತ್ತದ ಯುರೇನಿಯಂ ಒಪ್ಪಂದ, ಕೌಶಲ್ಯಾಭಿವೃದ್ಧಿ ಸೇರಿದಂತೆ 13 ಒಪ್ಪಂದಗಳಿಗೆ ಸಹಿ ಹಾಕಿತ್ತು. 42 ವರ್ಷಗಳ ನಂತರ ಕೆನಡಾಗೆ ಭೇಟಿ ನೀಡಿದ್ದ ಮೊದಲ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದರು. ಈಗ ಕೆನಡಾದ ಪ್ರಧಾನಿ ಸಹ ಭಾರತಕ್ಕೆ ಭೇಟಿ ನೀಡಲಿದ್ದಾರೆ.