ದೇಶ

ಉತ್ತರ ಪ್ರದೇಶ: ಎಟಿಎಂ ನಲ್ಲಿ ಬಂತು ಸ್ಕ್ಯಾನ್ ಮಾಡಿರುವ 2000 ರೂ ನೋಟು!

Srinivas Rao BV
ಲಖನೌ: 2000 ರೂಪಾಯಿಯ ನಕಲಿ ನೋಟುಗಳು ಪತ್ತೆಯಾದ ಬೆನ್ನಲ್ಲೇ ಉತ್ತರ ಪ್ರದೇಶದ ಎಟಿಎಂ ಒಂದರಲ್ಲಿ ಸ್ಕ್ಯಾನ್ ಮಾಡಿರುವ 2000 ರೂ ನೋಟು ಬಂದಿರುವುದು  ಪತ್ತೆಯಾಗಿದೆ. 
ಶಹಜಹಾನ್ ಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ನಲ್ಲಿ 2000 ರೂಪಾಯಿಯ ಸ್ಕ್ಯಾನ್ ಮಾಡಿರುವ ನೋಟು ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಪುನೀತ್ ಗುಪ್ತಾ ಎಂಬುವವರು ಎಟಿಎಂ ನಲ್ಲಿರುವ 10,000 ರೂ ತೆಗೆಯಲು ಹೋದಾಗ 2000 ರೂಪಾಯಿಯ ಸ್ಕ್ಯಾನ್ ಮಾಡಿರುವ ನೋಟು ಹೊರಬಂದಿದೆ. ಈ ಮಾಹಿತಿಯನ್ನು ಪುನೀತ್ ಗುಪ್ತಾ ಪೊಲೀಸರಿಗೆ ತಿಳಿಸಿದ್ದಾರೆ. 
ನಕಲಿ ನೋಟು ಪತ್ತೆಯಾದ ಬೆನ್ನಲ್ಲೇ ಎಟಿಎಂ ಮುಂಭಾಗದಲ್ಲಿ ನಿಂತಿದ್ದ ಜನರೂ ಸಹ ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಬ್ಯಾಂಕ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಎಟಿಎಂ ನಲ್ಲಿ ನಕಲಿ ನೋಟು ಪತ್ತೆಯಾಗಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. 
SCROLL FOR NEXT