ತಂಜಾವೂರು: ತಮಿಳುನಾಡಿನ ತಂಜಾವೂರಿನ ತಿರುಕನುರ್ಪಟ್ಟಿ ಎಂಬಲ್ಲಿ ಇಂದು ನಡೆದ ಜಲ್ಲಿಕಟ್ಟು ಪಂದ್ಯದ ಸಂದರ್ಭದಲ್ಲಿ 47 ಮಂದಿಗೆ ಗಾಯಗಳಾಗಿವೆ. ಅವರಲ್ಲಿ 23 ಮಂದಿ ಎತ್ತುಗಳನ್ನು ಸಾಕಿದವರಾಗಿದ್ದಾರೆ.
ಜಿಲ್ಲಾಧಿಕಾರಿ ಎ.ಅಣ್ಣದೊರೈ ಇಲ್ಲಿ ನಿನ್ನೆ ಜಲ್ಲಿಕಟ್ಟಿಗೆ ಚಾಲನೆ ನೀಡಿದ್ದರು.ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ 18 ಮಂದಿ ಚಿಕಿತ್ಸೆಗೆ ದಾಖಲಾಗಿದ್ದರೆ ಉಳಿದವರನ್ನು ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ.
ಪಂದ್ಯದಲ್ಲಿ ಒಟ್ಟು 276 ಎತ್ತುಗಳನ್ನು ಬಳಸಲಾಗಿತ್ತು.