ದೇಶ

ಎಎಫ್ಎಸ್ ಪಿಎ ಉಗ್ರವಾದಕ್ಕೆ ಪರಿಹಾರ ಅಲ್ಲ, ರೋಗ ಉಲ್ಬಣಕ್ಕೆ ಕಾರಣ; ಇರೋಮ್ ಶರ್ಮಿಳಾ ಪಕ್ಷ

Srinivas Rao BV
ನವದೆಹಲಿ: ಉಗ್ರವಾದ ನಿರ್ಮೂಲನೆಗೆ ಸೇನಾ ಪಡೆಗೆ ವಿಶೇಷ ಅಧಿಕಾರ (ಎಎಫ್ಎಸ್ ಪಿಎ) ಪರಿಹಾರವಲ್ಲ, ಬದಲಾಗಿ ರೋಗ ಮತ್ತಷ್ಟು ಉಲ್ಬಣವಾಗಲು ಕಾರಣವಾಗುತ್ತದೆ ಎಂದು ಇರೋಮ್ ಶರ್ಮಿಳಾ ಅವರ ಪಕ್ಷ ಪಿಆರ್ ಜೆಎ ಅಭಿಪ್ರಾಯಪಟ್ಟಿದೆ. 
ಮಣಿಪುರದಲ್ಲಿ ಸೇನಾ ಪಡೆಗೆ ವಿಶೇಷ ಅಧಿಕಾರ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇರೋಮ್ ಶರ್ಮಿಳಾ ಅವರ ಪಕ್ಷ ಪಿಆರ್ ಜೆಎ, 1980 ರಲ್ಲಿ ರಾಜ್ಯದಲ್ಲಿ ಎಎಫ್ಎಸ್ ಪಿಎ ಜಾರಿಗೆ ತರುವುದಕ್ಕೂ ಮುನ್ನ ಕೇವಲ ನಾಲ್ಕು ಬಂಡುಕೋರ ಸಂಘಟನೆಗಳಿದ್ದವು. ಆದರೆ ಸೇನಾ ಪಡೆಗೆ ವಿಶೇಷ ಅಧಿಕಾರ (ಎಎಫ್ಎಸ್ ಪಿಎ) ನೀಡಿದ ನಂತರ 32 ಕ್ಕೆ ಏರಿಕೆಯಾಗಿವೆ ಎಂದು ಹೇಳಿದೆ. 
ಸೇನಾ ಪಡೆಗೆ ವಿಶೇಷ ಅಧಿಕಾರ ನೀಡಿರುವುದನ್ನು ವಿರೋಧಿಸಿ 16 ವರ್ಷಗಳ ಸುದೀರ್ಘ ಹೋರಾಟ ನಡೆಸಿರುವ ಇರೋಮ್ ಶರ್ಮಿಳಾ ಅವರ ಪಿಆರ್ ಜೆಎ, ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, 60 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 
ಭಯೋತ್ಪಾದನೆ ವಿರುದ್ಧ ಹೋರಾಡಲು ಕಾಯ್ದೆ ಹಾಗೂ ಯೋಜನೆಗಳ ಅಗತ್ಯವಿದೆ ಆದರೆ ಎಎಫ್ಎಸ್ ಪಿಎ ಇವುಗಳ ಪೈಕಿ ಅಲ್ಲ. ಎಎಫ್ಎಸ್ ಪಿಎ ಉಗ್ರವಾದಕ್ಕೆ ಪರಿಹಾರ ಅಲ್ಲ ಎಂದು ಪಿಆರ್ ಜೆಎ ಹೇಳಿದೆ. 
SCROLL FOR NEXT