ಮತದಾರರು (ಸಂಗ್ರಹ ಚಿತ್ರ) 
ದೇಶ

ಉ.ಪ್ರದೇಶ ಚುನಾವಣೆ: ಐದನೇ ಹಂತದಲ್ಲಿ 57.36ರಷ್ಟು ಮತದಾನ

ಉತ್ತರ ಪ್ರದೇಶ ವಿಧಾನಸಭೆಗೆ ಸೋಮವಾರ ನಡೆದ ಐದನೇ ಹಂತದ ಚುನಾವಣೆಯಲ್ಲಿ ಸಂಜೆ ಐದು ಗಂಟೆಯವರೆಗೆ ಶೇ.57.36ರಷ್ಟು...

ಲಖನೌ: ಉತ್ತರ ಪ್ರದೇಶ ವಿಧಾನಸಭೆಗೆ ಸೋಮವಾರ ನಡೆದ ಐದನೇ ಹಂತದ ಚುನಾವಣೆಯಲ್ಲಿ ಸಂಜೆ ಐದು ಗಂಟೆಯವರೆಗೆ ಶೇ.57.36ರಷ್ಟು ಮತದಾನವಾಗಿದೆ.
ರಾಜ್ಯದ 11 ಜಿಲ್ಲೆಗಳ 51 ವಿಧಾಸಭೆ ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಶಾಂತಿಯುತ ಮಾತದಾನ ನಡೆದಿದ್ದು, ಇದುವರೆಗೆ ಶೇ.57.36ರಷ್ಟು ಮತದಾನವಾಗಿದೆ. ಇನ್ನು ಕೆಲವು ಕಡೆ ಜನ ಕ್ಯೂನಲ್ಲಿ ನಿಂತಿರುವುದರಿಂದ ಮತದಾನ ಹೆಚ್ಚಳವಾಗಬಹುದು ಎಂದು ಉತ್ತರ ಪ್ರದೇಶ ಚುನಾವಣಾ ಅಧಿಕಾರಿ ಟಿ.ವೆಂಕಟೇಶ್ ಅವರು ಹೇಳಿದ್ದಾರೆ.
ಈ ಹಿಂದೆ ನಡೆದ ನಾಲ್ಕು ಹಂತದ ಚುನಾವಣೆಯಲ್ಲಿ ಶೇ.64, ಶೇ.65, ಶೇ.61.16 ಹಾಗೂ ಶೇ.61ರಷ್ಟು ಮತದಾನವಾಗಿತ್ತು.
ಅಮೆಥಿ, ಸುಲ್ತಾನಪುರ, ಫೈಜಾಬಾದ್, ಬಾರಾಬಂಕಿ ಬಹರೈಚ್, ಬಸ್ತಿ, ಗೊಂದಾ, ಸಿದ್ಧಾರ್ಥನಗರ್, ಸಂತ್ ಕಬೀರ್ ನಗರ್, ಶ್ರವಸ್ತಿ  ಸೇರಿದಂತೆ 51 ಕ್ಷೇತ್ರಗಳ 617 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!