ದೇಶ

ಮಕ್ಕಳ ಕಳ್ಳಸಾಗಣೆಯೊಂದಿಗೆ ಬಿಜೆಪಿ ನಾಯಕಿಗಿರುವ ಸಂಬಂಧ ಡೈರಿಯಲ್ಲಿ ಬಹಿರಂಗ: ಸಿಐಡಿ

Srinivas Rao BV
ಸಿಲಿಗುರಿ: ಮಕ್ಕಳ ಕಳ್ಳಸಾಗಣೆ ಆರೋಪದಡಿ ಪಶ್ಚಿಮ ಬಂಗಾಳದಲ್ಲಿ ಬಂಧನಕ್ಕೊಳಗಾಗಿರುವ ಬಿಜೆಪಿ ನಾಯಕಿ ಜೂಹಿ ಚೌಧರಿ ಅವರನ್ನು ಸಿಐಡಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. 
ಬಿಜೆಪಿಯ ನಾಯಕಿ ಜೂಹಿ ಚೌಧರಿ ಮಕ್ಕಳ ಕಳ್ಳಸಾಗಣೆಗೂ ಸಂಬಂಧ ಇರುವುದರ ಬಗ್ಗೆ ಡೈರಿಯೊಂದರಲ್ಲಿ ಸುಳಿವಿದೆ, ಆರೋಪಿಯನ್ನು ಮಾ.2 ರಂದು ಕೋರ್ಟ್ ಗೆ ಹಾಜರುಪಡಿಸಲಾಗುವುದು ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.   
ಕಳೆದ ನವೆಂಬರ್ ನಲ್ಲಿ ಜಲ್ಪಾಯ್ ಗುರಿಯ ಅನಾಥ ಮಕ್ಕಳ ವಸತಿ ನಿಲಯದ ಮಕ್ಕಳನ್ನು ಮಾರಾಟ ಮಾಡಲಾಗುತ್ತಿದೆ. ಕಳ್ಳ ಸಾಗಾಣೆ ಮಾಡಲಾಗುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಇದಕ್ಕೆ ಪೂರಕವಾಗಿ ಕಳೆದ ಕೆಲವು ದಿನಗಳಿಂದ ಜೂಹಿ ಚೌಧರಿ ವಿರುದ್ಧ ಮಕ್ಕಳ ಸಾಗಣೆ ಆರೋಪ ಕೇಳಿಬಂದಿತ್ತು.  ವಸತಿ ನಿಲಯದ ಮುಖ್ಯಸ್ಥ ಚಂದನ್ ಚಕ್ರವರ್ತಿ ಎಂಬುವರನ್ನು ಬಂಧಿಸಿ ಸಿಐಡಿ ಪೊಲೀಸರು ವಿಚಾರಣೆ ನಡೆಸಿದಾಗ ಜೂಹಿ ಹೆಸರನ್ನು ಆತ ಬಾಯ್ಬಿಟ್ಟಿದ್ದ
ಇದೇ ವೇಳೆ ಸಿಐಡಿ ಅಧಿಕಾರಿಗಳು ಮಕ್ಕಳ ಕಳ್ಳಸಾಗಣೆಗೆ ಸಂಬಂಧಿಸಿದ ಮಾಹಿತಿಯುಳ್ಳ ಡೈರಿಯೊಂದನ್ನು ವಶಪಡಿಸಿಕೊಂಡಿದ್ದಾರೆ. ಡೈರಿಯಲ್ಲಿ ಜೂಹಿ ಚೌಧರಿಯ ಹೆಸರೂ ಕೇಳಿಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
SCROLL FOR NEXT