ಲಲಿತಾ ಸುಬ್ರಹ್ಮಣ್ಯಂ ಅವರ ಹುಟ್ಟುಹಬ್ಬ ಆಚರಣೆ( ಚಿತ್ರ ಕೃಪೆ: ದೀಪಕ್ ಸಾಲ್ವಿ) 
ದೇಶ

ವೃದ್ಧೆಯ ಜನ್ಮದಿನಕ್ಕೆ ಮುಂಬೈನ ಮಾತುಂಗ ಪೊಲೀಸರಿಂದ ಅನಿರೀಕ್ಷಿತ ಉಡುಗೊರೆ!

ಸದಾ ಅಪರಾಧಿಗಳ ಜಾಡು ಹಿಡಿಯುವ ಕೆಲಸದಲ್ಲಿ ನಿರತರಾಗಿರುವ ಪೊಲೀಸರು ಮುಂಬೈ ನಲ್ಲಿ ಹಿರಿಯ ನಾಗರಿಕರಿಗಾಗಿಯೇ ವಿಶೇಷ ಕಾಳಜಿ ವಹಿಸುತ್ತಿದ್ದಾರೆ.

ಮುಂಬೈ: ಸದಾ ಅಪರಾಧಿಗಳ ಜಾಡು ಹಿಡಿಯುವ ಕೆಲಸದಲ್ಲಿ ನಿರತರಾಗಿರುವ ಪೊಲೀಸರು ಮುಂಬೈ ನಲ್ಲಿ ಹಿರಿಯ ನಾಗರಿಕರಿಗಾಗಿಯೇ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಪ್ರಮುಖವಾಗಿ ಒಬ್ಬಂಟಿಯಾಗಿರುವ ಹಿರಿಯ ನಾಗರಿಕರ ಬಗ್ಗೆ ಮುಂಬೈ ನ ಮಾತುಂಗ ಪೊಲೀಸ್ ಇಲಾಖೆ ಕಾಳಜಿ ವಹಿಸುತ್ತಿದ್ದು, ಕಳೆದ 25 ವರ್ಷಗಳಿಂದ ಮುಂಬೈ ನ ಫ್ಲಾಟ್ ಒಂದರಲ್ಲಿ ವಾಸವಿರುವ ಲಲಿತಾ ಸುಬ್ರಹ್ಮಣ್ಯಂ ಅವರಿಗೆ ಜ.2 ರಂದು 83 ನೇ ಜನ್ಮದಿನದ ಅಂಗವಾಗಿ ಅನಿರೀಕ್ಷಿತ ಉಡುಗೊರೆ ನೀಡಿದೆ. 
ಲಲಿತಾ ಸುಬ್ರಹ್ಮಣ್ಯಂ ಅವರ ಮೂವರು ಮಕ್ಕಳ ಪೈಕಿ ಇಬ್ಬರು ಅಮೆರಿಕಾದಲ್ಲಿದ್ದರೆ ಇನ್ನೊಬ್ಬರು ಬೆಂಗಳೂರಿನಲ್ಲಿದ್ದಾರೆ. ಜನ್ಮದಿನದ ಅಂಗವಾಗಿ ಮಕ್ಕಳು ಮುಂಬೈಗೆ ಭೇಟಿ ನೀಡುವುದು ಸಾಧ್ಯವಾಗದ ಕಾರಣ ಮುಂಬೈ ನ   ವಡಾಲದಲ್ಲಿರುವ ವೃದ್ಧೆಯ ಮನೆಗೆ ಸ್ವತಃ ಮಾತುಂಗ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಅನಿರೀಕ್ಷಿತ ಉಡುಗೊರೆ ನೀಡಿದ್ದಾರೆ. 
ತಾವು ಬಳಸುವ ಔಷಧಗಳನ್ನು, ಖರೀದಿಸಿ ಅಗಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಅವರ ಬಗ್ಗೆ ನಿಗಾ ಇಟ್ಟಿರುವ ಪೊಲೀಸ್ ಪೇದೆಯ ಸಮ್ಮುಖದಲ್ಲಿ ಲಲಿತಾ ಸುಬ್ರಹ್ಮಣ್ಯಂ ಪೊಲೀಸ್ ಸಿಬ್ಬಂದಿಗಳು ತಂದಿದ್ದ ಕೇಕ್ ನ್ನು ಕತ್ತರಿಸಿ ಸಂಭ್ರಮಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಅನಿರೀಕ್ಷಿತ ಉಡುಗೊರೆಯಿಂದ ಸಂತೋಷಗೊಂಡ ಲಲಿತಾ ಸುಬ್ರಹ್ಮಣ್ಯಂ ಪೊಲೀಸ್ ಅಧಿಕಾರಿಗಳನ್ನು ಹರಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಎಂ.ಕಕಡ್  ಲಲಿತಾ ಸುಬ್ರಹ್ಮಣ್ಯಂ ಅವರು ನಮ್ಮ ತಾಯಿ ಇದ್ದಂತೆ, ಹುಟ್ಟುಹಬ್ಬದ ಆಚರಣೆಯಿಂದ ಅವರು ಅತ್ಯಂತ ಸಂತೋಷಪಟ್ಟರು ಎಂದು ಹೇಳಿದ್ದಾರೆ.
ಹಿರಿಯ ನಾಗರಿಕರಿಗಾಗಿಯೇ ವಿಶೇಷ ಹೆಲ್ಪ್ ಲೈನ್: 
ಮುಂಬೈ ಪೊಲೀಸರು ಒಬ್ಬಂಟಿಯಾಗಿರುವ ಹಿರಿಯ ನಾಗರಿಕರಿಗಾಗಿಯೇ ವಿಶೇಷ ಹೆಲ್ಪ್ ಲೈನ್ ಹೊಂದಿದ್ದು (1090) ಪೊಲೀಸ್ ಸಿಬ್ಬಂದಿಗಳು ಹಿರಿಯ ನಾಗರಿಕರಿಗೆ ಸಹಾಯ ಮಾಡಲು ಸದಾ ಸನ್ನದ್ಧರಾಗಿರುತ್ತಾರೆ. ಮಹಾರಾಷ್ಟ್ರದ ಮಾಜಿ ಗೃಹ ಸಚಿವ ದಿ.ಆರ್ ಆರ್ ಪಾಟೀಲ್ ಅವರು ಹಿರಿಯ ನಾಗರಿಕರ ಬಗ್ಗೆ ಕಾಳಜಿ ವಹಿಸುವ ಯೋಜನೆಯನ್ನು ಅವರ ಅವಧಿಯಲ್ಲಿ ಜಾರಿಗೆ ತಂದಿದ್ದರು  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್