ಟಿಎಂಸಿ ಸಂಸದ ಸುದಿಪ್ ಬಂಡೋಪಾಧ್ಯಾಯ
ಭುವನೇಶ್ವರ: ತೃಣಮೂಲ ಕಾಂಗ್ರೆಸ್ ಸಂಸದ ಸುದಿಪ್ ಬಂಡೋಪಾಧ್ಯಾಯ ಅವರನ್ನು ಸಿಬಿಐ ಬುಧವಾರ ಭುವನೇಶ್ವರ ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ. ಅವರು ನಿನ್ನೆ ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಪಟ್ಟಂತೆ ಬಂಧಿಸಿ ಸಿಬಿಐ ಕಸ್ಟಡಿಗೆ ಕಳುಹಿಸಲಾಗಿತ್ತು.
ವಿಚಾರಣೆಗೆ ಕರೆಸಿದ ಸಿಬಿಐ ನ್ಯಾಯಾಲಯ ನಿನ್ನೆ ಅವರನ್ನು ಕೋಲ್ಕತ್ತಾದಲ್ಲಿ ಬಂಧಿಸಿತ್ತು. ವಿಚಾರಣೆಗೆ ಕಳುಹಿಸುವ ಮುನ್ನ ಬಿಜೆಪಿ ವಿರುದ್ಧ ಹರಿಹಾಯ್ದ ಬಂಡೋಪಾಧ್ಯಾಯ, ನೋಟುಗಳ ಚಲಾವಣೆ ರದ್ದು ವಿರೋಧಿಸಿದ್ದಕ್ಕಾಗಿ ತಮ್ಮನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದರು.
ಈ ಬಂಧನ ಲೋಕಸಭೆಯಲ್ಲಿ ನನ್ನ ಪಾತ್ರವನ್ನು ತೋರಿಸುತ್ತದೆ ಎಂದು ಹೇಳಿದರು.
ಬಂಡೋಪಾಧ್ಯಾಯ ಅವರ ಬಂಧನದ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಗಲಭೆ, ಜಗಳ ತೀವ್ರವಾಗಿದೆ.
ಕೋಲ್ಕತ್ತಾದಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಮೇಲೆ ದಾಳಿ ನಿನ್ನೆ ಸಂಜೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದರಿಂದ ಅನೇಕ ಮಂದಿಗೆ ಗಾಯಗಳಾಗಿವೆ.