ದೇಶ

ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ 12 ವರ್ಷದ ಬಾಲಕನ ನೆರವಿಗೆ ಧಾವಿಸಿದ ಪ್ರಧಾನಿ ಮೋದಿ

Vishwanath S
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕನ ಚಿಕಿತ್ಸೆಗೆ ನೆರವು ನೀಡುವ ಮೂಲಕ ಮತ್ತೊಮ್ಮೆ ತಾವು ಜನನಾಯಕ ಎಂದು ಸಾಬೀತು ಪಡಿಸಿದ್ದಾರೆ. 
ಗುಜರಾತ್ ನ ಅಮ್ರೇಲಿಯಲ್ಲಿ ಎಸ್ಎಸ್ಪಿಇ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 12 ವರ್ಷದ ಪಾರ್ಥನಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಉಚಿತ ವ್ಯವಸ್ಥೆ ಮಾಡುವ ಮೂಲಕ ನೆರವಿನ ಹಸ್ತ ಚಾಚಿದ್ದಾರೆ. 
ಪಾರ್ಥನ ತಂದೆ ಮಗನ ಚಿಕಿತ್ಸೆಗಾಗಿ ತಮ್ಮ ಇದ್ದಬದ್ದ ಹಣವನ್ನೆಲ್ಲಾ ಖರ್ಚು ಮಾಡಿದ್ದರು. ಅಲ್ಲದೆ ಆಸ್ತಿ ಮತ್ತು ಒಡವೆಯನ್ನು ಮಾಡಿ ಬಾಲಕನಿಗೆ ಚಿಕಿತ್ಸೆ ಕೊಡಿಸಿದ್ದರು. ಆದರೆ ಕಾಯಿಲೆ ಗುಣವಾಗಿರಲಿಲ್ಲ. ಮುಂದೆ ದಾರಿ ಕಾಣದೆ ಪಾರ್ಥನ ತಂದೆ ನೆರವಿನ ಸಹಾಯ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. 
ಇನ್ನು ಏನು ಮಾಡಲಾಗದಂತ ಪರಿಸ್ಥಿತಿಗೆ ತಲುಪಿದ್ದೆ ಆಗ ಪ್ರಧಾನಿ ನನ್ನ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿದ್ದಾರೆ ಎಂದು ಪಾರ್ಥನ ತಂದೆ ಡಿಡಿ ನ್ಯೂಸ್ ಚಾನಲ್ ಗೆ ತಿಳಿಸಿದ್ದಾರೆ. 
ಪಾರ್ಥನಿಗೆ ಚಿಕಿತ್ಸೆ ನೀಡುತ್ತಿರುವ ಏಮ್ಸ್ ನ ವೈದ್ಯರು ಇದು ಅಪರೂಪದ ಕಾಯಿಲೆಯಾಗಿದ್ದು ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಚಿಕಿತ್ಸೆ ನಡೆಯುತ್ತಿದ್ದು ಪಾರ್ಥನ ಜೀವ ಉಳಿಸಲು ಸಕಲ ಪ್ರಯತ್ನ ಮಾಡಲಾಗುವುದು ಎಂದರು. 
SCROLL FOR NEXT