ದೇಶ

ಅಕಾಲಿ-ಬಿಜೆಪಿ ಕೆಟ್ಟ ಆಡಳಿತದಿಂದಾಗಿ ಪಂಜಾಬ್'ನಲ್ಲಿ ಆರ್ಥಿಕ ಸ್ಥಿತಿ ನಾಶವಾಗಿದೆ: ಮನಮೋಹನ್ ಸಿಂಗ್

Manjula VN

ನವದೆಹಲಿ: ಅಕಾಲಿ ದಳ ಹಾಗೂ ಬಿಜೆಪಿಯ ಕೆಟ್ಚ ಸರ್ಕಾರದಿಂದಾಗಿ ಪಂಜಾಬ್ ರಾಜ್ಯದಲ್ಲಿ ಆರ್ಥಿಕ ಸ್ಥಿತಿ ನಾಶವಾಗಿದೆ ಎಂದು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.

ಫೆ.4 ರಂದು ಪಂಜಾಬ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿಂದು ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಮಾತನಾಡಿರುವ ಅವರು, ಪಂಜಾಬ್ ಎಲ್ಲದರಲ್ಲೂ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದ್ದು, ಆದರೆ, ಇದು ಸೂಕ್ತ ರೀತಿಯಲ್ಲಿ ಸದ್ಭಳಕೆ ಮಾಡಲಾಗಿಲ್ಲ. ಅಕಾಲಿ ದಳ ಹಾಗೂ ಬಿಜೆಪಿ ಸರ್ಕಾರ ಕಳೆದ 10 ವರ್ಷಗಳಿಂದಲೂ ಪಂಜಾಬ್ ರಾಜ್ಯದಲ್ಲಿ ಕೆಟ್ಟ ಆಡಳಿತವನ್ನು ನಡೆಸಿದ್ದು, ಪಂಜಾಬ್ ನ ಸಾಮರ್ಥ್ಯವನ್ನು ನಾಶ ಮಾಡಿದೆ ಎಂದು ಆರೋಪಿಸಿದ್ದಾರೆ.

ಪಕ್ಷದ ಪ್ರಣಾಳಿಕೆ ದಾರ್ಶನಿಕ ದಾಖಲೆಯಾಗಿದ್ದು, ಕಳೆದ ಹತ್ತು ವರ್ಷಗಳಿಂದ ಪಂಜಾಬ್ ರಾಜ್ಯ ಕಳೆದುಕೊಂಡ ಹಾಗೂ ಪಂಜಾಬ್ ರಾಜ್ಯಕ್ಕೆ ಎದುರಾದ ನಷ್ಟಗಳನ್ನು ನಾವು ಸರಿಪಡಿಸುತ್ತೇವೆಂದು ಈ ಮೂಲಕ ಭರವಸೆಯನ್ನು ನೀಡುತ್ತೇವೆ.

ಪಂಜಾಬ್ ರಾಜ್ಯಕ್ಕೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅಮರಿಂದರ್ ಸಿಂಗ್ ಅವರು ನಿಂತಿದ್ದು, ಅಮರಿಂದರ್ ಸಿಂಗ್ ಅವರು ಅಂತರ್ ದೃಷ್ಟಿಯವನ್ನು ಹೊಂದಿರುವ ನಾಯಕರಾಗಿದ್ದು, ಇಂತಹ ನಾಯಕರು ಪಂಜಾಬ್ ರಾಜ್ಯಕ್ಕೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

SCROLL FOR NEXT