ದೇಶ

ನೋಟು ನಿಷೇಧದಿಂದ ದೇಶದ ಬಡಜನತೆಗೆ ಸಹಾಯವಾಗಿದೆ: ಅಮಿತ್ ಶಾ

Shilpa D

ಪಾಟ್ನಾ: ಪ್ರಧಾನಿ ಮೋದಿ ಅವರ ನೋಟು ನಿಷೇಧ ಕಾರ್ಯ ಪಕ್ಷಕ್ಕಿಂತ ದೇಶದ ಬಡಜನರಿಗೆ ಹೆಚ್ಚಿನ ಸಹಾಯ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಬಿಹಾರದಲ್ಲಿ ನಡೆದ ಜನಸಂಘ ಸಂಸ್ಥಾಪಕ ಹಾಗೂ ಬಿಜೆಪಿ ಸೈದ್ಧಾಂತಿಕ ವ್ಯಕ್ತಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಅವರ ಉಕ್ತಿಗಳನ್ನೊಳಗೊಂಡ 15ನೇ ಸಂಕಲನ ಸಂಪುಟ ಬಿಡುಗಡೆ ಮಾಡಿ ಮಾತನಾಡಿದ ಅಮಿತ್ ಶಾ. ನೋಟು ನಿಷೇಧದಿಂದ ಬಡ ಜನರಿಗೆ ಹೆಚ್ಚಿನ ಉಪಯೋಗವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಚುನಾವಣಾ ಸುಧಾರಣೆಗಾಗಿ ಬಿಜೆಪಿ ಈಗಾಗಲೇ ಹಲವು ತಂಡಗಳನ್ನು ರಚಿಸಿದ್ದು, ಕಡಿಮೆ ಖರ್ಚಿನಲ್ಲಿ ಚುನಾವಣೆ ನಡೆಸಬೇಕು, ಪಕ್ಷಕ್ಕೆ ದೇಣಿಗೆ ನೀಡುವವರ ಹೆಸರು ಪಾರದರ್ಶಕವಾಗಿರಬೇಕು, ಎಂಬೆಲ್ಲಾ ಮಾಹಿತಿಗಳನ್ನು ಒಳಗೊಂಡ ಸಲಹೆಗಳನ್ನು ಸಿದ್ಧಪಡಿಸಿದೆ ಎಂದು ಹೇಳಿದ್ದಾರೆ.

ದೇಶವನ್ನು ಅರ್ಥರಹಿತ ಸುಧಾರಣೆ ಮಾಡುವಲ್ಲಿ ಬಿಜೆಪಿ ಗಂಭೀರ ಪ್ರಯತ್ನ ಮಾಡುತ್ತಿದೆ.  ನೋಟು ನಿಷೇಧದ ಮೂಲಕ ಕಪ್ಪು ಹಣ ನಿಯಂತ್ರಿಸಲು ಪ್ರಧಾನಿ ಮೋದಿ ಯತ್ನಿಸಿದ್ದಾರೆ. ಚುನಾವಣೆಯಲ್ಲಿ ಸುಧಾರಣೆ ತರಲು ಕೆಲವು ಬುದ್ದಿ ಜೀವಿಗಳು ಮತು ತಜ್ಞರನ್ನು ಸಲಹೆ ನೀಡಲು ಮೋದಿ ಕೇಳಿದ್ದರು ಎಂದು ಅಮಿತ್ ಶಾ ವಿವರಿಸಿದರು.

SCROLL FOR NEXT