ಪ್ರಧಾನಮಂತ್ರಿ ನರೇಂದ್ರ ಮೋದಿ 
ದೇಶ

ಕಲಿಕೆಯ ಪ್ರಕ್ರಿಯೆಯನ್ನು ಎಂದಿಗೂ ಬಿಡಬೇಡಿ: ಯುವಕರಿಗೆ ಮೋದಿ ಸಲಹೆ

ದೇಶದಲ್ಲಿರುವ ಯುವಜನತೆ ಕಲಿಕೆಯ ಪ್ರಕ್ರಿಯೆಯನ್ನು ಎಂದಿಗೂ ನಿಲ್ಲಿಸಬಾರದು, ದೇಶ ಕಟ್ಟುವಲ್ಲಿ ಸ್ವಾಮಿ ವಿವೇಕಾನಂದ ಅವರ ಚಿಂತನೆ ಎಂದಿಗೂ ಪ್ರೇರಣೆಯಾಗಿರಲಿದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು...

ನವದೆಹಲಿ: ದೇಶದಲ್ಲಿರುವ ಯುವಜನತೆ ಕಲಿಕೆಯ ಪ್ರಕ್ರಿಯೆಯನ್ನು ಎಂದಿಗೂ ನಿಲ್ಲಿಸಬಾರದು, ದೇಶ ಕಟ್ಟುವಲ್ಲಿ ಸ್ವಾಮಿ ವಿವೇಕಾನಂದ ಅವರ ಚಿಂತನೆ ಎಂದಿಗೂ ಪ್ರೇರಣೆಯಾಗಿರಲಿದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ.

ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದಲ್ಲಿ ಆಯೋಜನೆ ಮಾಡಲಾಗಿದ್ದ ಸ್ವಾಮಿ ವಿವೇಕಾನಂದ ಅವರು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಮಾತನಾಡಿರುವ ಅವರು, ಭಾರತ ಯುವಜನತೆಯನ್ನು ಹೊಂದಿರುವ ದೇಶವಾಗಿದ್ದು, ದೇಶಕಟ್ಟುವಲ್ಲಿ ಸ್ವಾಮಿ ವಿವೇಕಾನಂದ ಅವರ ಚಿಂತನೆ ಎಂದಿಗೂ ಪ್ರೇರಣೆಯಾಗಿರಲಿದೆ ಎಂದು ಹೇಳಿದ್ದಾರೆ.

ಜನವರಿ 12 ಸಾಮಾನ್ಯ ದಿನವಲ್ಲ. ಸ್ವಾಮಿ ವಿವೇಕಾನಂದ ಅವರ ಶಕ್ತಿ ಹಾಗೂ ಅವರ ಚಿಂತನೆ ಪ್ರತೀಯೊಬ್ಬರ ಮಿದುಳಿಗೂ ಆಕಾರವನ್ನು ನೀಡಿದೆ. ಆಧ್ಯಾತ್ಮಿಕತೆ ಎಂಬುದು ಕೇವಲ ಧರ್ಮದೊಂದಿಗಷ್ಟೇ ಸಂಬಂಧವನ್ನು ಹೊಂದಿಲ್ಲ. ಮಾನವೀಯತೆಯೊಂದಿಗೂ ಸಂಬಂಧವನ್ನು ಹೊಂದಿದೆ. ಕೆಲ ಜನರು ಇದನ್ನು ಧರ್ಮವೊಂದಕ್ಕೆ ಮಾತ್ರ ಸಂಬಂಧ ಹೊಂದಿದೆ ಎಂದು ಹೇಳುತ್ತಾರೆಂದು ತಿಳಿಸಿದ್ದಾರೆ.

1984ರಲ್ಲಿ ಭಾರತ ಸರ್ಕಾರ ಸ್ವಾಮಿ ವಿವೇಕಾನಂದ ಅವರ ಜನ್ಮ ದಿನವನ್ನು 'ರಾಷ್ಟ್ರೀಯ ಯುವಕರ ದಿನ'ವನ್ನಾಗಿ ಘೋಷಣೆ ಮಾಡಿತ್ತು, ಬಳಿಕ 1985 ರಿಂದ ನಿರಂತವಾಗಿ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ