ಹೈದರಾಬಾದ್: ವಿಶ್ವದಲ್ಲಿ ಯಾವ ದೇಶದಲ್ಲೂ ಇಲ್ಲದ ಮಾನವ ಸಂಪನ್ಮೂಲ ಇಂದು ಭಾರತದಲ್ಲಿದೆ ಎಂದು ತೆಲಂಗಾಣ ರಾಜ್ಯ ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮ ರಾವ್ ಅವರು ಗುರುವಾರ ಹೇಳಿದ್ದಾರೆ.
ಹೈದರಾಬಾದ್ ನ ರಾಮ ಕೃಷ್ಣ ಮಠದಲ್ಲಿ ಆಯೋಜನೆ ಮಾಡಿದ್ದ ರಾಷ್ಟ್ರೀಯ ಯುವಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಈ ಹಿಂದೆ ಜನಸಂಖ್ಯಾ ಸ್ಫೋಟವನ್ನು ದೇಶದ ದೊಡ್ಡ ಸಮಸ್ಯೆಯೆಂದು ಹೇಳಲಾಗುತ್ತಿತ್ತು. ಆದರೆ, ಇಂದು ಆ ಜನಸಂಖ್ಯಾ ಸ್ಫೋಟವನ್ನೇ ದೇಶದ ವರ ಎಂದು ನೋಡುಲಾಗುತ್ತಿದೆ ಎಂದು ಹೇಳಿದ್ದಾರೆ.
ದೇಶದಲ್ಲಿರುವ ಶೇ.50 ರಷ್ಟು ಜನಸಂಖ್ಯೆಯಲ್ಲಿ 29 ಮತ್ತು 35 ವಯಸ್ಸಿನ ಅಂತರದಲ್ಲಿರುವ ಜನರೇ ಹೆಚ್ಚಾಗಿದ್ದು, ದೇಶದಲ್ಲಿ ಇಂದು ಶೇ.65 ರಷ್ಟು ಯುವಕರಿದ್ದಾರೆ. ಈ ಹಿಂದೆ ಜನಸಂಖ್ಯೆಯನ್ನೇ ದೇಶದ ದೊಡ್ಡ ಸಮಸ್ಯೆಯಾಗಿ ನೋಡಲಾಗುತ್ತಿತ್ತು. ಆದರೆ, ಇಂದು ಆ ಪರಿಸ್ಥಿತಿ ಬದಲಾಗಿದೆ. ಇದೀಗ ಅದೇ ಜನಸಂಖ್ಯೆಯನ್ನು ವರವಾಗಿ ನೋಡಲಾಗುತ್ತಿದೆ. ಇಡೀ ವಿಶ್ವದಲ್ಲಿಯೇ ಯಾವ ದೇಶದಲ್ಲೂ ಇರದ ಮಾನವ ಸಂಪನ್ಮೂಲವನ್ನು ಭಾರತ ಹೊಂದಿದೆ ಎಂದು ತಿಳಿಸಿದ್ದಾರೆ.