ನವದೆಹಲಿ: ಉತ್ತರಪ್ರದೇಶದ ಆಡಳಿತಾರೂಢ ಸರ್ಕಾರ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನಗಳನ್ನು ಮಾಡುತ್ತಿದ್ದು, ದಿನಕಳೆಯುತ್ತಿದ್ದಂತೆ ಸಮಾಜವಾದಿ ಪಕ್ಷ ನಾಟಕದ ಕಂಪನಿಯಂತೆ ಪರಿವರ್ತನೆಗೊಳ್ಳುತ್ತಿದೆ ಎಂದು ಬಹುಜನ ಸಮಾಜ ಪಕ್ಷ ಶನಿವಾರ ವ್ಯಂಗ್ಯವಾಡಿದೆ.
ಈ ಕುರಿತಂತೆ ಮಾತನಾಡಿರುವ ಬಿಎಸ್ ಪಿ ಪಕ್ಷದ ನಾಯಕ ಸುಧೀಂದ್ರ ಭಡೋರಿಯಾ ಅವರು, ರಾಜ್ಯದಲ್ಲಿ ಆಡಳಿತ ಹಾಗೂ ಅಭಿವೃದ್ಧಿಯನ್ನು ಮಾಡುತ್ತಿಲ್ಲ. ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ಸಮಾಜವಾದಿ ಪಕ್ಷ ನಾಟಕದ ಕಂಪನಿಯಂತೆ ಪರಿವರ್ತನೆಗೊಳ್ಳುತ್ತಿದೆ. ಚುನಾವಣಾ ಆಯೋಗ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಿ ಆದರೆ, ಉತ್ತರಪ್ರದೇಶ ಜನತೆ ಮಾತ್ರ ಸಮಾಜವಾದಿ ಪಕ್ಷವನ್ನು ತಿರಸ್ಕರಿಸಿದ್ದಾರೆಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾವದ್ ಹಾಗೂ ಅವರ ಮಗ ಅಖಿಲೇಶ್ ಯಾದವ್ ಅವರು ಕೇವಲ ಅವರ ಬಗ್ಗೆಯಷ್ಟೇ ಆಲೋಚನೆ ಮಾಡುತ್ತಿದ್ದಾರೆ. ರಾಜ್ಯ ಅಭಿವೃದ್ಧಿ ಕಡೆಗೆ ಅವರು ಗಮನ ನೀಡುತ್ತಿಲ್ಲ. ಉತ್ತರಪ್ರದೇಶ ರಾಜ್ಯ ಅಭಿವೃದ್ಧಿಯೊಂದಿಗೆ ತಾವು ಏನನ್ನೂ ಮಾಡುವುದಿಲ್ಲ ಎಂಬುದನ್ನು ಅವರು ಈಗಾಗಲೇ ರಾಜ್ಯಕ್ಕೆ ತೋರಿಸಿದ್ದಾರೆ. ಪ್ರಸ್ತು ಅವರ ಅಧಿಕಾರ ಹಾಗೂ ಲಾಭದ ಕಡೆಗಷ್ಟೇ ಆಲೋಚನೆ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ.