ಹಿಮಾಚಲ ಪ್ರದೇಶ: 50ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ನಾಶ
ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಕಳೆದ ರಾತ್ರಿ ಸುಮಾರು 56 ಮನೆಗಳು ಬೆಂಕಿಗೆ ಆಹುತಿಯಾಗಿವೆ...
ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಕಳೆದ ರಾತ್ರಿ ಸುಮಾರು 56 ಮನೆಗಳು ಬೆಂಕಿಗೆ ಆಹುತಿಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಿಮ್ಲಾದ ತನ್ನು ಗ್ರಾಮದಲ್ಲಿರುವ ಮರದ ಮನೆಗಳಿಗೆ ಬೆಂಕಿಯ ಧಗೆ ಹತ್ತಿಕೊಂಡು ಹೊತ್ತಿ ಉರಿಯಿತು. ಮಾನವರ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. ಆದರೆ ಮನೆಗಳು ಬೆಂಕಿಗೆ ಆಹುತಿಯಾಗಿರುವುದರಿಂದ 50ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದು, ದನ ಕರುಗಳು ಕೂಡ ಬೆಂಕಿಗೆ ಸಿಲುಕಿ ಸತ್ತುಹೋಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ರೋಹನ್ ಠಾಕೂರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ನಿರಾಶ್ರಿತ ಕುಟುಂಬಗಳನ್ನು ಸಮೀಪದ ತಾತ್ಕಾಲಿಕ ವಸತಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಬೆಂಕಿ ಹತ್ತಿ ಉರಿದಿದ್ದರಿಂದ ಉಂಟಾದ ನಷ್ಟದ ಬಗ್ಗೆ ಅಂದಾಜು ಸಿಕ್ಕಿಲ್ಲ.