ದೇಶ

1984ರ ಸಿಖ್ ವಿರೋಧಿ ದಂಗೆ ಕೇಸು: ಸ್ಥಿತಿ ವರದಿ ಸಲ್ಲಿಸುವಂತೆ ಕೇಂದ್ರಕ್ಕೆ 'ಸುಪ್ರೀಂ' ಆದೇಶ

Sumana Upadhyaya
ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಕುರಿತ ಕೇಸಿನ ಸ್ಥಿತಿಗತಿಗೆ ಸಂಬಂಧಪಟ್ಟಂತೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಅವರ ನೇತೃತ್ವದ ನ್ಯಾಯಪೀಠ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ನಿಗದಿಪಡಿಸಿದೆ.
1984 ಸಿಖ್ ವಿರೋಧಿ  ದಂಗೆ ಕೇಸಿಗೆ ಸಂಬಂಧಪಟ್ಟಂತೆ ದೆಹಲಿ ಕೋರ್ಟ್ ಡಿಸೆಂಬರ್ 21ರಂದು ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ತನಿಖೆಗೆ ಸಂಪೂರ್ಣ ಸಹಕರಿಸಬೇಕೆಂದು ಮತ್ತು ಅನುಮತಿಯಿಲ್ಲದೆ ದೇಶ ಬಿಟ್ಟು ಹೋಗಬಾರದೆಂದು ಷರತ್ತನ್ನು ಕೂಡ ನ್ಯಾಯಾಲಯ ವಿಧಿಸಿತ್ತು.
ಕೇಸಿನ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರನ್ನು ನೇಮಕ ಮಾಡಬೇಕೆಂದು ಕುಮಾರ್ ಅವರು ಸಲ್ಲಿಸಿದ್ದ ಮನವಿಯನ್ನು ನವೆಂಬರ್ 4ರಂದು ದೆಹಲಿ  ಹೈ ಕೋರ್ಟ್ ತಿರಸ್ಕರಿಸಿತ್ತು.
ದೆಹಲಿ ಹೈ ಕೋರ್ಟ್ ಕುಮಾರ್ ಅವರ ಕೇಸಿನ ವಿಚಾರಣೆಯನ್ನು ಪಟಿಯಾಲಾ ಹೌಸ್ ಕೋರ್ಟ್ ಗೆ ವರ್ಗಾಯಿಸಿತ್ತು. ಪಟಿಯಾಲಾ ಕೋರ್ಟ್ ಜಿಲ್ಲಾ ನ್ಯಾಯಾಧೀಶರಿಗೆ ವಿಚಾರಣೆಯ ಪ್ರಕ್ರಿಯೆಗಳನ್ನು ವಿಡಿಯೋ ರೆಕಾರ್ಡ್ ಮಾಡುವಂತೆ ಆದೇಶಿಸಿದೆ.
ದೆಹಲಿಯ ಜಾನಕಪುರಿ ಪ್ರದೇಶದಲ್ಲಿ 1984 ನವೆಂಬರ್ 1ರಂದು ಸಜ್ಜನ್ ಕುಮಾರ್ ಜನಸಮೂಹವನ್ನು ಪ್ರಚೋದಿಸಿ ಸೊಹಾನ್ ಸಿಂಗ್ ಮತ್ತು ಅವರ ಪುತ್ರ ಅವತಾರ್ ಸಿಂಗ್ ಅವರ ಸಾವಿಗೆ ಕಾರಣರಾಗಿರುವ ಆರೋಪ ಅವರ ಮೇಲಿದೆ.
SCROLL FOR NEXT