ದೇಶ

ರ್ಯಾಲಿ ವೇಳೆ ಹರಿದ ಕುರ್ತಾ ತೋರಿಸಿ ಪ್ರಧಾನಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

Vishwanath S
ಹೃಷಿಕೇಶ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರ್ಯಾಲಿ ವೇಳೆ ತಮ್ಮ ಹರಿದ ಕುರ್ತಾ ತೋರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
ಉತ್ತರಾಖಂಡದ ಹೃಷಿಕೇಶದಲ್ಲಿ ನಡೆದ ಕಾಂಗ್ರೆಸ್ ರ್ಯಾಲಿ ವೇಳೆ ಭಾಷಣದ ನಡುವೆ ವೇದಿಕೆಯ ಎದುರಿಗೆ ಬಂದ ರಾಹುಲ್ ಗಾಂಧಿ ತಮ್ಮ ಕುರ್ತಾದ ಕಿಸೆ ಹರಿದಿರುವುದನ್ನು ಜನರಿಗೆ ತೋರಿಸಿದರು. 
ಇದೇ ವೇಳೆ ಪ್ರಧಾನಿ ಮೋದಿ ಅವರು ಬೆಲೆಬಾಳುವ ಬಟ್ಟೆ ಧರಿಸುತ್ತಾರೆ. ಮೋದಿ ಅವರ ಬಳಿ ದುಬಾರಿಯಾದ ಬಟ್ಟೆಗಳ ಸಂಗ್ರಹವಿದೆ. ನನ್ನ ಕುರ್ತಾ ಹರಿದಿದೆ ಎಂದು ಚಿಂತೆಯಿಲ್ಲ. ಜನರು ಬಡತನ ಎದುರಿಸುತ್ತಿದ್ದಾರೆ ಇದನ್ನು ನಿವಾರಿಸಲು ಮೋದಿ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು. 
SCROLL FOR NEXT